ಸರಕಾರಿ ಕಿರಿಯ ಪ್ರಾಥಮಿಕ ಕೋಯಾನಗರ ಶಾಲೆ ನಾವುಂದ,ಸುವರ್ಣ ಮಹೋತ್ಸವ ಸಂಭ್ರಮ
ಕುಂದಾಪುರ:ಬೈಂದೂರು ತಾಲೂಕಿನ ನಾವುಂದ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಕೋಯಾನಗರ ಶಾಲೆಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಶನಿವಾರ ನಡೆಯಿತು.ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಸಿಂಚನ ಕಾರ್ಯಕ್ರಮ ಮತ್ತು ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮ ಸೇರಿದಂತೆ ನಾಟಕ ಪ್ರದರ್ಶನ ನಡೆಯಿತು.ಶಾಲೆಗೆ ಕೊಡುಗೆ ನೀಡಿರುವ ದಾನಿಗಳನ್ನು,ಅಡುಗೆ ಸಹಾಯಕರನ್ನು, ಶಿಕ್ಷಕರನ್ನು ಗೌರವಿಸಲಾಯಿತು. ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಮಾತನಾಡಿ,ಒಂದು ವಿಶಿಷ್ಟವಾದ ಕಲ್ಪನೆಯೊಂದಿಗೆ ಆರಂಭಗೊಂಡ ನಾವುಂದ ಗ್ರಾಮದ ಕೋಯಾನಗರ […]