ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವರ ಷಷ್ಠಿ ಮಹೋತ್ಸವ
ಕುಂದಾಪುರ:ತಾಲೂಕಿನ ಪ್ರಸಿದ್ಧ ಸೇನಾಪುರ ಗ್ರಾಮದ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಷಷ್ಠಿ ಮಹೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತುಷಷ್ಠಿ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀಸುಬ್ರಹ್ಮಣ್ಯ ದೇವರಿಗೆ ವಿಶೇಷ ಹೂವಿನ ಅಲಂಕಾರ ಪೂಜೆ,ಮಂಗಳಾರತಿ ಸೇವೆ,ಹಣ್ಣುಕಾಯಿ ಸೇವೆ ಹಾಗೂ ಹರಕೆ ಸೇವೆ,ಪ್ರಧಾನಹೋಮ,ನವಕಲಶಾಭಿಷೇಕ,ಕಲಶಾಭಿಷೇಕ,ಹರಿವಾಣ ನೆವೇದ್ಯ ಸೇವೆ,ಮಡೆ ಪ್ರದಕ್ಷಿಣೆ,ಶ್ರೀನಾಗದರ್ಶನ,ಬ್ರಾಹ್ಮಣ ಸಂತರ್ಪಣೆ ಮತ್ತು ಸಾರ್ವಜನಿಕ ಪ್ರಸಾದ ವಿತರಣೆ,ಗಣಪತಿ ಪ್ರಾರ್ಥನೆ ಜರುಗಿತು.ಕುಂದಾಪುರ ಮತ್ತು ಬೈಂದೂರು ತಾಲೂಕಿನ ಜನರು ಸೇರಿದಂತೆ ಘಟ್ಟದ ಮೇಲಿನ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ಸಂತಾನಕಾರಕನಾದ ಶ್ರೀ ಸುಬ್ರಹ್ಮಣ್ಯ […]