ವೈಷ್ಣವಿ ಖಾರ್ವಿ ಗೆ ಚಿನ್ನದ ಪದಕ

ಕುಂದಾಪುರ:ಪವರ್ ಸ್ಟಾರ್ ಫಿಟ್ನೆಸ್ ಸೆಂಟರ್ ನೆಲಮಂಗಲ ಬೆಂಗಳೂರು ಅವರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸಬ್ ಜೂನಿಯರ್ 69 ಕೆಜಿ ವಿಭಾಗದಲ್ಲಿ ವೈಷ್ಣವಿ ಖಾರ್ವಿ ಅವರು ಚಿನ್ನದ ಪದಕ ಗೆದ್ದಿದ್ದಾರೆ.ಅವರು ಕುಂದಾಪುರದ ಕಿಂಗ್ ಫಿಷರ್ ಸ್ಪೋರ್ಟ್ಸ್ ಕ್ಲಬ್( ರಿ ) ಖಾರ್ವಿ ಕೇರಿ ಹಾಗೂ ನ್ಯೂ ಹರ್ಕ್ಯುಲೆಸ್ ಜಿಮ್ (ರಿ )ಕುಂದಾಪುರ ಸಂಸ್ಥೆಯ ಸದಸ್ಯರಾಗಿರುತ್ತಾರೆ.

ಮರವಂತೆ:ನೆರಳು ಮನೆ ಹಸ್ತಾಂತರ

ಕುಂದಾಪುರ:ಅಶಕ್ತರ ಬಾಳಿಗೆ ನೆರವಾಗುವ ದೃಷ್ಟಿಯಿಂದ ಸೂರನ್ನು ಕಟ್ಟಿಸಿಕೊಟ್ಟಿರುವುದು ಬಹಳಷ್ಟು ಉತ್ತಮವಾದ ಕೆಲಸವಾಗಿದೆ.ಮಾನವ ಜನಾಂಗ ಒಂದೆ ಎನ್ನುವ ಮನೋಭಾವದಿಂದ ಬಾಳಿದರೆ ಮಾತ್ರ ಸಮಾಜದಲ್ಲಿನ ಅಸಾಮತೋಲನವನ್ನು ಹೊಗಲಾಡಿಸಬಹುದು ಎಂದು ಪತ್ರಕರ್ತ ಅರುಣ್ ಕುಮಾರ್ ಶಿರೂರು ಹೇಳಿದರು.ಬಾಂಧವ್ಯ ಫೌಂಡೇಶನ್ ನೆರಳು ಯೋಜನೆ ವತಿಯಿಂದ ಬೈಂದೂರು ತಾಲೂಕಿನ ಮರವಂತೆಯಲ್ಲಿ ನಿರ್ಮಿಸಿದ ನೆರಳು 11ನೇ ಮನೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.ಬಾಂಧವ್ಯ ಫೌಂಡೇಶನ್ ಸ್ಥಾಪಕಾಧ್ಯಕ್ಷ ದಿನೇಶ್ ಬಾಂಧವ್ಯ ಅವರು ಫಲಾನುಭವಿ ತುಂಗ ಪೂಜಾರಿ ಅವರಿಗೆ ಮನೆಯ ಕೀ ಹಸ್ತಾಂತರಿಸಿದರು.ಝೀ ಕನ್ನಡ ಸರಿಗಮಪ ಚಾಂಪಿಯನ್ ಯಶವಂತ್ […]

ಗಂಗೊಳ್ಳಿ:ಬಟ್ಟೆ ಅಂಗಡಿಯಲ್ಲಿ ಕಳ್ಳತನ

ಕುಂದಾಪುರ:ತಾಲೂಕಿನ ಗಂಗೊಳ್ಳಿ ಜಾಮೀಯಾ ಕಾಂಪ್ಲೆಕ್ಸ್‍ನಲ್ಲಿರುವ ಮಾಲಿ ರಿಜ್ವಾನ್ ಎಂಬುವವರ ಎಮ್.ಎಮ್ ಕಲೆಕ್ಷನ್ ಬಟ್ಟೆ ಹಾಗೂ ಪ್ಯಾನ್ಸಿ ಅಂಗಡಿಗೆ ನುಗ್ಗಿದ ಕಳ್ಳರು 90,000.ರೂ ನಗದು ಹಾಗೂ 15,000.ರೂ ಮೌಲ್ಯದ ಮೊಬೈಲ್ ಕಳವು ಗೈದಿರುವ ಘಟನೆ ಭಾನುವಾರ ನಡೆದಿದೆ.ಎಮ್.ಎಮ್ ಕಲೆಕ್ಷನ್ ಬಟ್ಟೆ ಹಾಗೂ ಪ್ಯಾನ್ಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಸಂಜೆ ಸುಮಾರು 7 ಗಂಟೆ ಸುಮಾರಿಗೆ ಅಂಗಡಿಗೆ ಬಾಗಿಲನ್ನು ಹಾಕಿ ಪ್ರಾರ್ಥನೆಗೆಂದು ಮಸೀದಿಗೆ ತೆರಳಿದ ಸಮಯದಲ್ಲಿ ಅಂಗಡಿಗೆ ನುಗ್ಗಿದ ಕಳ್ಳರು ಕ್ಯಾಶ್ ಕೌಂಟರ್‍ನಲ್ಲಿದ್ದ ನಗದು ಹಾಗೂ ಬೆಲೆ ಬಾಳುವ […]

You cannot copy content of this page