ಏಪ್ರಿಲ್.11 ರಂದು ಶ್ರೀಶಾರದಾ ಸದ್ವಿದ್ಯಾ ವಸಂತ ಶಿಬಿರ ಉದ್ಘಾಟನೆ

ಕುಂದಾಪುರ:ವಸಂತ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಏಪ್ರಿಲ್ 11 ರ ಗುರುವಾರದಂದು ಮಧ್ಯಾಹ್ನ 2.30ಕ್ಕೆ ಬೈಂದೂರು ತಾಲೂಕಿನ ನಾವುಂದ ಬಡಾಕೆರೆ ಧಾರ್ಮಿಕ ಮಂದಿರದಲ್ಲಿ ನಡೆಯಲಿದೆ.ಹಾಲಾಡಿ ಪಂಚಾಂಗಕರ್ತರು ವಿದ್ವಾನ್ ವಾಸುದೇವ ಜೋಯಿಸರು ತಟ್ಟುವಟ್ಟು,ನಾಗಯಕ್ಷೀ ಪಾತ್ರಿಗಳು ಮತ್ತು ಆಡಳಿತ ಧರ್ಮದರ್ಶಿಗಳು ಶ್ರೀರಾಜರಾಜೇಶ್ವರಿ ದೇವಸ್ಥಾನ ಪಡುಕೋಣೆ ರಾಜೇಶ್ ಹೆಬ್ಬಾರ್,ಮಾಜಿ ಧರ್ಮದರ್ಶಿಗಳು ಶ್ರೀಕ್ಷೇತ್ರ ಕೊಲ್ಲೂರು ರಾಜೇಶ್ ಕಾರಂತ್ ಉಪ್ಪಿನಕುದ್ರು,ನಿವೃತ್ತ ಮಹಾಪ್ರಬಂಧಕರು ಕರ್ನಾಟಕ ಬ್ಯಾಂಕ್ ಯರ್ಲಪಾಡಿ ನಾಗರಾಜ ರಾವ್ ಬಾಯರಿ,ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ ಕಳಿ ಆಲೂರು ಡಾ.ರಾಜೇಶ್ ಬಾಯರಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಸನ್ಮಾನ ಕಾರ್ಯಕ್ರಮ,ಪ್ರತಿಭಾ ಪುರಸ್ಕಾರ […]

ಮಾಜಿ ಶಾಸಕರೇ ಸಮುದಾಯ ಭವನ ಅನುದಾನ ತಡೆಹಿಡಿದಿದ್ದಾರೆ:ಪ್ರಿಯದರ್ಶಿನಿ ದೇವಾಡಿಗ ಆರೋಪ

ಕುಂದಾಪುರ:ವಿಶ್ವ ನಾಯಕ ಭಾರತ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವ ಹಾಗೂ ಸಂಸದರಾದ ಬಿ.ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಹತ್ತು ವರ್ಷದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂದು ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು.ಬೈಂದೂರು ಅಂಬಿಕಾ ಇಂಟರ್ನ್ಯಾಷನಲ್ ಹೊಟೇಲ್ ನಲ್ಲಿ ಸೋಮವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.ಗ್ರಾಮೀಣ ಪ್ರದೇಶಗಳ ಸಂಪರ್ಕ ರಸ್ತೆಯನ್ನು […]

ರಕ್ತ ಸ್ರಾವದಿಂದ ಬಾಣಂತಿ ಮಹಿಳೆ ಸಾವು

ಮಂಗಳೂರು:ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ರಕ್ತ ಸ್ರಾವದಿಂದ  ಸಾವನ್ನಪ್ಪಿದ ಘಟನೆ ನಡೆದಿದೆ.ಲಾಯಿಲ ಗ್ರಾಮದ ಗಾಂಧಿನಗರ ನಿವಾಸಿ ಗಾಯತ್ರಿ (26) ಎಂಬುವರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ನಂತರ ವಿಪರೀತ ರಕ್ತ ಸ್ರಾವ ಉಂಟಾಗಿದ್ದರ ಪರಿಣಾಮ ಬಾಣಂತಿ ಮಹಿಳೆ ಸಾವನ್ನಪ್ಪಿದ್ದಾರೆ.ಮೃತ ಮಹಿಳೆಗೆ  3 ವರ್ಷದ ಹೆಣ್ಣು ಮಗುವೊಂದಿದ್ದು,ನವಜಾತ  ಶಿಶು ಸಹಿತ ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.

You cannot copy content of this page