ಬೈಂದೂರು ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು-ಈಶ್ವರಪ್ಪಗೆ ಬೈಂದೂರು ಬಿಜೆಪಿ ಪ್ರಶ್ನೆ

ಬೈಂದೂರು:ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಬಿ.ವೈ. ರಾಘವೇಂದ್ರ ಅವರನ್ನು ಪಕ್ಷದ ವರಿಷ್ಠರೇ ತೀರ್ಮಾನಿಸಿ ಪ್ರಕಟಿಸಿದ್ದಾರೆ.ಹೀಗಿದುವಾಗ ಪಕ್ಷದ ನಿಲುವನ್ನೇ ಒಪ್ಪಿಕೊಳ್ಳದ ನಿಮಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅವರು ಈಶ್ವರಪ್ಪ ವಿರುದ್ಧ ಕಿಡಿಕಾರಿದ್ದಾರೆ. ಬೈಂದೂರಿಗೆ ಬಂದು ಹಿಂದುತ್ವದ ಬಗ್ಗೆ ಮಾತನಾಡಿದ ತಕ್ಷಣವೇ ದೊಡ್ಡ ಬದಲಾವಣೆಯಾಗಲಿದೆ ಎಂಬ ಭ್ರಮೆ ಬೇಡ.ಚುನಾವಣೆ ಸಂದರ್ಭದಲ್ಲಿ ಮಾತ್ರ ನೆನಪಾಗುವ […]

ಶ್ರೀ ರಜತ ಕವಚ ಸಮರ್ಪಣೆ ಪುರಮೆರವಣಿಗೆ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ಶ್ರೀರಾಮ ದೇವಸ್ಥಾನದಲ್ಲಿ ಏಪ್ರಿಲ್ 10 ರಿಂದ ಏಪ್ರಿಲ್ 22 ರ ತನಕ ನಡೆಯಲಿರುವ ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀರಾಮ ದೇವರಿಗೆ ಸಮರ್ಪಣೆ ಮಾಡಲಿರುವ ರಜತ ಕವಚ ಪುರ ಮೆರವಣಿಗೆ ಬುಧವಾರ ವಿಜೃಂಭಣೆಯಿಂದ ನಡೆಯಿತು.ತ್ರಾಸಿ ಸರ್ಕಲ್ ನಿಂದ ಶ್ರೀರಾಮ ಮಂದಿರ ವರೆಗೆ ಭವ್ಯ ಮೆರವಣಿಗೆ ಸಾಗಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು, ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷರು ಮತ್ತು ಮಹಿಳಾ ಸಮಿತಿ ಅಧ್ಯಕ್ಷರು,ಸದಸ್ಯರು ಉಪಸ್ಥಿತರಿದ್ದರು.

ಹಸಿರು ಹೊರೆ ಕಾಣಿಕೆ ಸಮರ್ಪಣೆ

ಕುಂದಾಪುರ:ತಾಲೂಕಿನ ಕನ್ಯಾನ ಗ್ರಾಮದ ಕೂಡ್ಲು ಬಾಡಬೆಟ್ಟು ಶ್ರೀಶನೀಶ್ವರ,ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಏಪ್ರಿಲ್ 14 ರ ಭಾನುವಾರದಂದು ನಡೆಯಲಿರುವ ಅಷ್ಟಬಂಧ ನಾಗಮಂಡಲೋತ್ಸ ಕಾರ್ಯಕ್ರಮದ ಅಂಗವಾಗಿ ಹಸಿರು ಹೊರೆ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ಅದ್ಧೂರಿಯಾಗಿ ಬುಧವಾರ ನಡೆಯಿತು.ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ಅವರು ಹಸಿರು ಹೊರೆ ಕಾಣಿಕೆ ಮೆರವಣಿಗೆ ಚಾಲನೆಯನ್ನು ನೀಡಿ ಮಾತನಾಡಿ,ಕೂಡ್ಲು ಬಾಡಬೆಟ್ಟು ಶ್ರೀಶನೀಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಅಷ್ಟ ಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮಕ್ಕೆ ಭಕ್ತಾಬಿಮಾನಿಗಳಿಂದ ತುಂಬು ಹೃದಯಿಂದ ಹೊರೆ ಕಾಣಿಕೆಯನ್ನು ಪಡೆದುಕೊಳ್ಳಲಾಗಿದೆ.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನಾಗಮಂಡಲ ಸೇವಾ ಕಾರ್ಯಕ್ರಮದಲ್ಲಿ […]

You cannot copy content of this page