ಗಾನ ಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ ನಿಧನ

ಕುಂದಾಪುರ:ಬಡಗುತಿಟ್ಟಿನ ಖ್ಯಾತ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ್ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ತನ್ನ ವಿಭಿನ್ನ ಕಂಠ ಸಿರಿ ಮೂಲಕ ಗಾನ ಕೋಗಿಲೆ ಎಂದು ಪ್ರಸಿದ್ಧಿ ಪಡೆದಿರುವ ಧಾರೇಶ್ವರ ಅವರ ಸಾವು ಯಕ್ಷ ಪ್ರೇಮಿಗಳಿಗೆ ತುಂಬಲಾರದ ನಷ್ಟ ಉಂಟುಮಾಡಿದೆ.ಧಾರೇಶ್ವರ ಅವರಿಗೆ ಧಾರೇಶ್ವರ ಅವರೇ ಸರಿ ಸಾಟಿ ಆಗಬಲ್ಲರು.

ರಾಷ್ಟ್ರೀಯ ಭೂ ದಿನಾಚರಣೆ,ಮರವಂತೆ ಬೀಚ್ ಸ್ವಚ್ಛತೆ

ಕುಂದಾಪುರ:ರಾಷ್ಟ್ರೀಯ ಭೂ ದಿನದ ಅಂಗವಾಗಿ ಹೆಮ್ಮಾಡಿಜನತಾ ಪದವಿಪೂರ್ವ ಕಾಲೇಜು ಹಾಗೂ ಮಣಿಪಾಲ ಮಾಹೆ ರಾಷ್ಟ್ರೀಯ ಸೇವಾ ಯೋಜನೆ ಘಟಕದಸಹಯೋಗದೊಂದಿಗೆ ಮರವಂತೆ ಬೀಚ್ ನಲ್ಲಿ ಸ್ವಚ್ಚತಾ ಕಾರ್ಯವನ್ನು ಮಾಡಲಾಯಿತು.ಮಾಹೆ ಮಣಿಪಾಲದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮರವಂತೆ ಕಡಲ ಕಿನಾರೆಯ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ ಜನತಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವ್ರಂದದವರು ಉಪಸ್ಥಿತರಿದ್ದರು.

ಶ್ರೀಬೊಬ್ಬರ್ಯ ದೇವರಿಗೆ ಬೆಳ್ಳಿ ಮುಖವಾಡ ಸಮರ್ಪಣೆ

ಬೈಂದೂರು:ತಾಲೂಕಿನ ನಾವುಂದ ಗ್ರಾಮದ ಸಪರಿವಾರ ಶ್ರೀಪದ್ಮಾವತಿ ಅಮ್ಮನವರ ಪುಷ್ಠಿ ಮಹೋತ್ಸವ ಕಾರ್ಯಕ್ರಮ ಮತ್ತು ಶ್ರೀಬೊಬ್ಬರ್ಯ ದೇವರಿಗೆ ಬೆಳ್ಳಿ ಮುಖವಾಡ ಸಮರ್ಪಣೆ ಹಾಗೂ ಶ್ರೀನಾಗ ದೇವರಿಗೆ ಆಶ್ಲೇಷಾ ಬಲಿ,ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬುಧವಾರ ನಡೆಯಿತು. ಶ್ರೀಪದ್ಮಾವತಿ ಅಮ್ಮನವರಿಗೆ ಪರಿಕಲಶಾಭಿಷೇಕ,ಪುಷ್ಠಿ ವರ್ಧಂತ್ಯುತ್ಸವ,ಬ್ರಹ್ಮ ಕಲಶಾಭಿಷೇಕ,ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.

You cannot copy content of this page