ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ಕ್ರೀಡಾ ವಾರ್ಷಿಕೋತ್ಸವ 2023-24 ಉದ್ಘಾಟನೆ

ಉಡುಪಿ:ಬ್ರಹ್ಮಾವರ ವಿದ್ಯಾಲಕ್ಮೀ ಸಮೂಹ ಶಿಕ್ಷಣ ಸಂಸ್ಥೆ ಇಲ್ಲಿನ ಕ್ರೀಡಾ ವಾರ್ಷಿಕೋತ್ಸವ 23-2024 ಕಾರ್ಯಕ್ರಮ ಗಾಂಧಿ ಮೈದಾನ ಅಜ್ಜರಕಾಡುನಲ್ಲಿ ನಡೆಯಿತು.ಜ್ಞಾನಸುಧಾ ಪದವಿಪೂರ್ವ ಕಾಲೇಜು ಉಡುಪಿ ಪ್ರಿನ್ಸಿಪಾಲ್ ಸಂತೋಷ್ ಅವರು ಮಾತನಾಡಿ,ವಿದ್ಯಾರ್ಥಿಗಳಿಗೆ ವಿದ್ಯೆ ಎಂಬುವುದು ಅಮೂಲ್ಯವಾದ ಸಂಪತ್ತು ಆಗಿದೆ.ಸರಿಯಾದ ಸಮಯಕ್ಕೆ, ಸರಿಯಾದ ರೀತಿಯಲ್ಲಿ ಪಡೆದುಕೊಂಡು ಜ್ಞಾನವನ್ನು ಉತ್ತಮವಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಸಂಸ್ಥಾಪಕ ಅಧ್ಯಕ್ಷರಾದ ಸುಬ್ರಹ್ಮಣ್ಯ ಹಾಗೂ ನಿರ್ದೇಶಕಿ ಮಮತಾ ವಿದ್ಯಾರ್ಥಿಗಳನ್ನು ಕುರಿತು ಹಿತನುಡಿಗಳನ್ನು ಆಡಿದರು.ಉಪಪ್ರಾಂಶುಪಾಲೆಸುಜಾತ ಹಾಗೂ ಕ್ರೀಡಾ ಸಂಯೋಜಕರಾದ ನಿತಿನ್ ಶೆಣೈ […]

ದೋಣಿ ರಿಂಗ್ ಕಳವು ಆರೋಪಿ ಬಂಧನ,ಸ್ವತ್ತು ವಶಕ್ಕೆ

ಕುಂದಾಪುರ:ಬೈಂದೂರು ಪೊಲೀಸ್ ಠಾಣಾ ಸರಹದ್ದಿನ ಉಪ್ಪುಂದ ಗ್ರಾಮದ ಕರ್ಕಿಕಳಿ ಎಡಮಾವಿನ ಹೊಳೆ ಸಮೀಪದ ದಡದಲ್ಲಿ ಎ.ಶ್ರೀನಿವಾಸ ಖಾರ್ವಿ ಎಂಬುವವರು ನಿಲ್ಲಿಸಿದ್ದ ಶ್ರೀ ಹಕ್ರೆಮಠ ಯಕ್ಷೇಶ್ವರಿ ಪ್ರಸಾದ ರಾಣಿ ಬಲೆ ದೋಣಿಯ ರೋಪನ್ನು ತುಂಡರಿಸಿ 95 ಹಿತ್ತಾಳೆಯ ರಿಂಗ್‍ಗಳನ್ನು ಕಳವು ಗೈದ ಆರೋಪಿಯನ್ನು ಸ್ವತ್ತು ಸಹಿತ ಬಂಧಿಸಲಾಗಿದೆ.ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ನಿವಾಸಿ ಆರೋಪಿತ ಮಹೇಶ್ ಖಾರ್ವಿ (30 ವರ್ಷ) ಅವರನ್ನು ವಶಕ್ಕೆ ಪಡೆದು ಕೊಂಡಿದ್ದ ಪೊಲೀಸರು 1,00,000 ರೂ ಮೌಲ್ಯದ 95 ಹಿತ್ತಾಳೆ ರಿಂಗ್ ಗಳನ್ನು ಸ್ವಾಧೀನ […]

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ‌ಜನಸ್ತೋಮ

ಮಂಗಳೂರು:ಸರಣಿ ರಜೆ ಹಿನ್ನಲೆಯಲ್ಲಿ ರಾಜ್ಯದ ಪ್ರಮುಖ ಯಾತ್ರಾ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತ ಸಮೂಹವೆ ಭಾನುವಾರ ಕಂಡು ಬಂದಿದೆ.ಶುಕ್ರವಾರ,ಶನಿವಾರ ಹಾಗೂ ಭಾನುವಾರ ಸರಣಿಯಾಗಿ ಸರಕಾರಿ ರಜೆಗಳಿದ್ದ ಹಿನ್ನಲೆಯಲ್ಲಿ ಮೂರು ದಿನಗಳಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದರು.ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿ,ಹೊರಾಂಗಣ, ಪೇಟೆಯಲ್ಲಿ ಭಕ್ತರ ದಟ್ಟಣೆ ಹೆಚ್ಚಿತ್ತು ಹಾಗೂ ಪೇಟೆಯಲ್ಲಿ ವಾಹನ ಓಡಾಟವೂ ಅಧಿಕವಾಗಿತ್ತು.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು ಶ್ರೀ ದೇವರ ದರುಶನಕ್ಕೆ ಹಾಗೂ ಅನ್ನ ಪ್ರಸಾದ ಸ್ವೀಕರಿಸಲು ಯಾವುದೇ ರೀತಿಯ ಸಮಸ್ಯೆ […]

You cannot copy content of this page