ಮೇ.27 ರಂದು ಅನಿರ್ದಿಷ್ಟಾವಧಿ ಸತ್ಯಾಗ್ರಹ

ಕುಂದಾಪುರ:ಆಲೂರು ಕೊರಗ ಸಮುದಾಯದವರಿಗೆ ಡಾ.ಮಹಮ್ಮದ್ ಫೀರ್ ವರದಿ ಪ್ರಕಾರ ಭೂಮಿ ನೀಡಲು ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ,ಜಿಲ್ಲಾ ಸಂಘಟನಾ ಸಮಿತಿ ಉಡುಪಿ ಅವರ ಆಶ್ರಯದಲ್ಲಿ ಮೇ.27 ರಂದು ಬೆಳಿಗ್ಗೆ 10 ರಿಂದ ಆಲೂರು ಗ್ರಾಮ ಪಂಚಾಯಿತಿ ಎದುರು ಅನಿರ್ದಿಷ್ಟಾವಧಿ ಹಗಲು ರಾತ್ರಿ ಧರಣಿ ಸತ್ಯಾಗ್ರಹ ನಡೆಯಲಿದೆ.

ಶ್ರೀಗಣೇಶ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 10% ಡಿವಿಡೆಂಟ್ ಘೋಷಣೆ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಶ್ರೀಗಣೇಶ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅದರ ಸಭೆ ಜಿ.ಎಸ್.ಆಚಾರ್ಯ ಸ್ಮಾರಕ ಸಭಾಭನದಲ್ಲಿ ಸಂಘದ ಅಧ್ಯಕ್ಷ ಮುರಳೀಧರ ಐತಾಳ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.ಕೃಷಿಕರು,ಕೂಲಿ ಕಾರ್ಮಿಕರು,ಬಡ ವರ್ಗದ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ಕಳೆದ ಏಳು ವರ್ಷಗಳ ಹಿಂದೆ ಆರಂಭಗೊಂಡಿರುವ ಶ್ರೀಗಣೇಶ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಜನೋಪಯೋಗಿ ಕೆಲಸಗಳ ಮುಖಾಂತರ ಹೆಸರನ್ನು ಗಳಿಸಿದೆ.ಅಶಕ್ತರಿಗೆ ನೆರವು,ವಿದ್ಯಾರ್ಥಿ ವೇತನ,ಆರೋಗ್ಯ ಶಿಬಿರ ಆಯೋಜನೆ,ಶಾಲೆಗಳಿಗೆ ಪಿಠೋಪಕರಣಗಳನ್ನು ಕೊಡುಗೆಯಾಗಿ ನೀಡುತ್ತಾ ಸಂಘವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ.ಶ್ರೀಗಣೇಶ ಕ್ರೆಡಿಟ್ […]

ಅನುಮಾನಾಸ್ಪದ ಸಾವು ಶಂಕೆ,ಹೂತ ಮೃತದೇಹ ಮೇಲಕ್ಕೆತ್ತಿ ಮರುತನಿಖೆ

ಮಂಗಳೂರು:ತಮ್ಮನ ಸಾವಿನ ಬಗ್ಗೆ ಅಣ್ಣ ಅನುಮಾನ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮರು ತನಿಖೆಗಾಗಿ ನ್ಯಾಯಾಲಯಲದ ಆದೇಶದಂತೆ ಮಂಜೇಶ್ವರ-ವಿಟ್ಲ ಪೊಲೀಸರು ಹಾಗೂ ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ಕನ್ಯಾನ ಮಸೀದಿಯ ದಫನ ಭೂಮಿಯಿಂದ ಮೃತದೇಹವನ್ನು ಮೇಲಕ್ಕೆತ್ತಿದ್ದ ಘಟನೆ ನಡೆದಿದೆ.ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನ ನಿವಾಸಿ ಅಶ್ರಫ್(44)ಎಂಬವರು ಮಂಜೇಶ್ವರ ಠಾಣಾ ವ್ಯಾಪ್ತಿಯ ಸುಂಕದಕಟ್ಟೆ ಮಜೀರ್ ಪಳ್ಳದಲ್ಲಿ ಪತ್ನಿಯ ಜೊತೆ ವಾಸವಾಗಿದ್ದು ಗೂಡಂಗಡಿ ವ್ಯವಹಾರ ನಡೆಸಿಕೊಂಡಿದ್ದರು.ಮೇ 5ರಂದು ಮನೆಯಲ್ಲಿ ಊಟ ಮಾಡಿ ಮಲಗಿದ್ದ ಅಶ್ರಫ್ ಅವರು ಮರುದಿನ ಅಂದರೆ ಮೇ 6ರಂದು ಮೃತಪಟ್ಟಿದ್ದರು.ಆದರೆ ತರಾತುರಿಯಲ್ಲಿ ಪತ್ನಿ […]

You cannot copy content of this page