ಕಾರು‌ ಪಲ್ಟಿಯಾಗಿ ನಾಲ್ವರು‌ ವಿದ್ಯಾರ್ಥಿಗಳಿಗೆ ಗಾಯ

ಉಡುಪಿ:ರಾಷ್ಟ್ರೀಯ ಹೆದ್ದಾರಿ 66ರ ಕೊಪ್ಪಲಂಗಡಿ ಬಳಿ ಮಣಿಪಾಲದ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರೊಂದು ರಸ್ತೆ ಬದಿಯ ರಕ್ಷಣಾ ಕಂಬಕ್ಕೆ ಡಿಕ್ಕಿಯಾಗಿ ಉರುಳಿ ಬಿದ್ದ ಬಿದ್ದ ಪರಿಣಾಮ ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.ದ್ರುವ್ ಯಾದವ್,ಸಿದ್ದಾರ್ಥ್, ಕೃಷ್ ಮತ್ತು ಮಹಮ್ಮದ್ ಕುರೇಶಿ ಗಾಯಗೊಂಡ ವಿದ್ಯಾರ್ಥಿಗಳು,ಸಹಪಾಟಿಗಳು ಜೊತೆ ಗೂಡಿ ಮಂಗಳವಾರ ಬೆಳಗ್ಗೆ ಮಣಿಪಾಲದಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ರಕ್ಷಣಾ ಕಂಬಕ್ಕೆ ಡಿಕ್ಕಿಯಾಗಿ ರಸ್ತೆಯಿಂದ ಕೆಳಕ್ಕೆ ಉರುಳಿ ಬಿದ್ದಿದೆ.ಗಾಯಾಳುಗಳಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆಕಾಪು ಠಾಣೆಯಲ್ಲಿ […]

ನದಿಗೆ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ಕುಂದಾಪುರ:ಬೈಂದೂರು ತಾಲೂಕಿನ ನಾಡ ಗ್ರಾಮದ ಬಡಾಕೆರೆ ನಿವಾಸಿ ಮಂಜು (57) ಎಂಬುವವರು ಬಡಾಕೆರೆ ಸಮೀಪವಿರುವ ಸೌಪರ್ಣಿಕಾ ನದಿ ದಡದ ಮೇಲೆ ನಿಂತು ಬಲೆ ಬೀಸಿ ಮೀನು ಹಿಡಿಯುವ ಸಮಯದಲ್ಲಿ ಆಕಸ್ಮಿಕವಾಗಿ ನದಿಗೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಘಟನೆ ವಿವರ:-ಮೀನುಗಾರಿಕೆ ವೃತ್ತಿಯನ್ನು ಮಾಡಿಕೊಂಡಿರುವ ಮಂಜು ಅವರು ಎಂದಿನಂತೆ ಸೋಮವಾರ ಮಧ್ಯಾಹ್ನ 3.30 ಸುಮಾರಿಗೆ ನದಿಯಲ್ಲಿ ಮೀನು ಹಿಡಿಯಲೆಂದು ಮನೆಯಿಂದ ತೆರಳಿದ್ದಾರೆ.ಸೌಪರ್ಣಿಕಾ ನದಿ ದಡದ ಮೇಲೆ ನಿಂತು ಬಲೆ ಬೀಸಿ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಸೌಪರ್ಣಿಕಾ ನದಿಗೆ […]

ಸೇತುವೆ ಸುರಕ್ಷ ಗಾರ್ಡ್ ಗೆ ಡಿಕ್ಕಿ ಹೊಡೆದ ಬಸ್ ಪ್ರಯಾಣಿಕರು ಪಾರು

ಉಡುಪಿ:ಉಡುಪಿಯಿಂದ ಬ್ರಹ್ಮಾವರದ ಕಡೆಗೆ ಚಲಿಸುತ್ತಿದ್ದ ಬಸ್ಸೊಂದು ಸ್ವರ್ಣ ನದಿ ಕಲ್ಯಾಣ್ಪುರ ಸೇತುವೆಯ ಗಾರ್ಡ್ ಗೆ ಡಿಕ್ಕಿ ಹೊಡೆದಿದೆ.ಅಪಘಾತದ ರಭಸಕ್ಕೆ ಸೇತುವೆ ಗಾರ್ಡ್ ಮುರಿದು ನದಿಗೆ ಬಿದ್ದಿದೆ.ನದಿಗೆ ಉರುಳಿ ಬೀಳುವ ಪರಿಸ್ಥಿತಿಯಲ್ಲಿದ್ದ ಬಸ್ ಅಪಾಯದಿಂದ ಪಾರಾಗಿದೆ.ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.ಅದೆ ಸಮಯದಲ್ಲಿ ಸೇತುವೆ ಕೆಳಗಡೆ ದೋಣಿಯಲ್ಲಿ ಮೀನುಗಾರಿಕೆ ಮಾಡುತಿದ್ದ ಶಂಕರ ಎನ್ನುವವರ ಮೇಲೆ ಸಿಮೆಂಟು ಕಂಬದ ತುಂಡ್ಡು ಮುರಿದು ಬಿದ್ದು ಕೈಗೆ ಹೊಡೆತ ಬಿದ್ದಿದೆ.ರಾಷ್ಟ್ರೀಯ ಹೆದ್ದಾರಿ 66 ರ ಕಲ್ಯಾಣಪುರ ಸೇತುವೆ 1963 ರಲ್ಲಿ ನಿರ್ಮಾಣವಾಗಿದ್ದು 6 ದಶಗಳಷ್ಟು ಹಳೆಯದಾಗಿದೆ. […]

You cannot copy content of this page