ಸೌಪರ್ಣಿಕಾ ನದಿ ತೀರ ಜಲಾವೃತ,ಸಂತೃಸ್ಥರ ಗೋಳು ಕೇಳುವವರೆ ಇಲ್ಲಾ

ಕುಂದಾಪುರ;ಕಳದೆರಡು ದಿನಗಳಿಂದ ಎಡಬಿಡದೆ ಸುರಿದ ಭಾರಿ ಮಳೆಗೆ ಸೌಪರ್ಣಿಕಾ ನದಿ ಉಕ್ಕಿ ಹರಿದ ಪರಿಣಾಮ ನಾವುಂದ ಸಾಲ್ಬುಡ,ಬಡಾಕೆರೆ,ಮರವಂತೆ,ಕುರು ದ್ವೀಪ,ಪಡುಕೋಣೆ ಭಾಗದಲ್ಲಿ ರಾತ್ರೋರಾತ್ರಿ ನೆರೆ ನೀರು ಮನೆ ಬಾಗಿಲಿಗೆ ನುಗ್ಗಿದ್ದು ಅವಾಂತರ ಸೃಷ್ಟಿ ಉಂಟು ಮಾಡಿದೆ.ನೆರೆ ನೀರು ಮನೆ ಬಾಗಿಲಿಗೆ ನುಗ್ಗಿದ ಪರಿಣಾಮ ನೂರಾರು ಕುಟುಂಬಗಳು ತೊಂದರೆಗೆ ಸಿಲುಕಿ ಕೊಂಡಿದ್ದಾರೆ.ಒಂದು ವಾರದ ಹಿಂದೆ ನೆರೆ ಯಿಂದ ಸಂಕಷ್ಟವನ್ನು ಅನುಭವಿಸಿದ ನೆರೆ ಪೀಡಿತ ಪ್ರದೇಶದ ಜನರು ಮಂಗಳವಾರ ಮತ್ತೆ ಕಾಣಿಸಿಕೊಂಡಿದ್ದ ನೆರೆ ನೀರಿ ನಿಂದ ತೊಂದರೆ ಪಡುವಂತಾಯಿತು.ನಾವುಂದ ಸಾಲ್ಬುಡ ಪ್ರದೇಶಕ್ಕೆ […]

ಮಳೆ ಅಬ್ಬರ,ಶಾಲೆ ದೇವಳ ಕೃಷಿ ಗದ್ದೆಗಳಿಗೆ ನುಗ್ಗಿದ ನೀರು

ಸಿದ್ದಾಪುರ:ಕಳೆದೆರೆಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಗ್ರಾಮೀಣದ ಅಮಾಸೆಬೈಲ್ ಸಿದ್ದಾಪುರ ಹಳ್ಳಿಹೊಳೆ ಆಜ್ರಿ ಶಂಕರನಾರಾಯಣ ಅಂಪಾರು ಹೊಸಂಗಡಿ ಮುಂತಾದ ಕಡೆ ಮಳೆ ಅಬ್ಬರಕ್ಕೆ ಹಲವಾರು ವಿದ್ಯುತ್ ಕಂಬಗಳು ಬೃಹತಾಕಾರಾದ ಮರಗಳು ಧರೆಗುರುಳಿದ್ದು ಜನಸಂಚಾರಕ್ಕೆ ಅಡ್ಡಿಯಾಗಿದ್ದು ಸುತ್ತುವರಿದ ಸಂಚಾರ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.ಘಾಟ್ ಪ್ರದೇಶದಿಂದ ಬಾರಿ ಮಟ್ಟದಲ್ಲಿ ನೀರು ಹರಿದು ಬರುತ್ತಿದ್ದು ನದಿ ಹಳ್ಳ ತೋಡುಗಳು ತುಂಬಿ ಹರಿದಿದ್ದು ಗದ್ದೆಗಳಿಗೆ ನೀರು ನುಗ್ಗಿ ಜಲಾವೃತವಾಗಿದೆ ಇತ್ತಿಚೆಗೆ ಬಿತ್ತನೆ ಮಾಡಿದ ಭತ್ತ ಕೃಷಿಗಳು ಸಂಪೂರ್ಣ ಮಳೆ ಪಾಲಾಗಿವೆ.ಮನೆ ದೇವಸ್ಥಾನ ತೋಟಗಳಿಗೆ […]

ಮೆಕೋಡು ಶೇಡಕುಳಿ ಕೆರೆ ದಂಡೆ ಕುಸಿದು ಅಡಿಕೆ ತೋಟಕ್ಕೆ ಹಾನಿ

ಕುಂದಾಪುರ:ಭಾರಿ ಮಳೆಗೆ ಬೈಂದೂರು ತಾಲೂಕಿನ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಕೋಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಮೇಲ್ಭಾಗದಲ್ಲಿರುವ ಶೇಡಕುಳಿ ಕೆರೆ ದಂಡೆ ಕುಸಿದು ಹೋಗಿದ್ದ ಘಟನೆ ಮಂಗಳವಾರ ನಡೆದಿದೆ.ಕೆರೆ ದಂಡೆ ಕುಸಿದು ಹೋಗಿದ್ದರ ಪರಿಣಾಮ ಕೆರೆ ಕೇಳ ಭಾಗದಲ್ಲಿರುವ ಪ್ರವೀಣ್ ಚಂದ್ರಶೆಟ್ಟಿ ಅವರ ತೋಟಕ್ಕೆ ನೀರಿನೊಂದಿಗೆ ಮಣ್ಣು ನುಗ್ಗಿ ನೂರಾರು ಅಡಿಕೆ ಗಿಡ ಸಹಿತ ಬಾಳೆ ನಾಶವಾಗಿದೆ.ಘಟನೆಯಲ್ಲಿ ಲಕ್ಷಾಂತರ.ರೂ ನಷ್ಟ ಉಂಟಾಗಿದೆ.ಮೆಕೋಡು ದೇವಸ್ಥಾನದ ಅನ್ನ ಛತ್ರದ ಒಳಗೆ ಕೆರೆ ನೀರು ನುಗ್ಗಿದ್ದರಿಂದ ಕೇಸರು ಮಯವಾಗಿದ್ದು ಕಟ್ಟಡದೊಳಗೆ ಇದ್ದ ಅಮೂಲ್ಯವಾದ […]

You cannot copy content of this page