ಬಡಾಕೆರೆ:ಸಮಾಲೋಚನಾ ಸಭೆ ಉದ್ಘಾಟನೆ
ಕುಂದಾಪುರ:ಕಂಬದಕೋಣೆ ಶಿಕ್ಷಣ ಸಂಯೋಜಕ ಕೇಂದ್ರದ ಜುಲೈ ತಿಂಗಳ ಸಮಾಲೋಚನಾ ಸಭೆ ಸ.ಹಿ.ಪ್ರಾ.ಶಾಲೆ ಬಡಾಕೆರೆಯಲ್ಲಿ ಶನಿವಾರ ನಡೆಯಿತು.ಶ್ರೀ ಶೃಂಗೇರಿ ಪೀಠದ ಪ್ರಾಂತೀಯ ಧರ್ಮಾಧಿಕಾರಿಗಳು ಹಾಗೂ ಶಾಲೆಯನ್ನು ದತ್ತು ಸ್ವೀಕಾರ ಮಾಡಿರುವ ವೇದ.ಮೂರ್ತಿ ಲೋಕೇಶ ಅಡಿಗ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ,ಶಿಕ್ಷಣದೊಂದಿಗೆ ಸತ್ಯಶೀಲತೆ,ನ್ಯಾಯ, ಧರ್ಮಾಚರಣೆ,ಸಂಸ್ಕೃತಿಗಳು ಕೂಡಿದಾಗ ಮಾತ್ರ ಉತ್ತಮ ಶಿಕ್ಷಣ ದೊರೆಯುತ್ತದೆ.ಶಿಕ್ಷಕರು ಅಂತಹ ಗುರುತರವಾದ ಜವಾಬ್ದಾರಿಯನ್ನು ವಹಿಸಿದಾಗ ಶಿಕ್ಷಣ ಪರಿಪೂರ್ಣವಾಗುವುದು ಎಂದು ಶುಭ ಹಾರೈಸಿದರು.ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಕಲಿಕಾ ಬಲವರ್ಧನೆಗಾಗಿ ನಡೆಸಬಹುದಾದ ಕಾರ್ಯ ಚಟುವಟಿಕೆಗಳ ಬಗ್ಗೆ ಬೆಳಕು ಚೆಲುವ ಮಾಹಿತಿಯನ್ನು […]