ಬಾವಿಯೊಳಗೆ ಅವಿತು ಕೊಂಡಿದ್ದ ಮೊಸಳೆ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಕುಂದಾಪುರ:ಬೈಂದೂರು ತಾಲೂಕಿನ ನಾಗೂರು ಕೊಡೇರಿ ವಿಶ್ವನಾಥ ಉಡುಪ ಅವರಿಗೆ ಸಂಬಂಧಿಸಿದ ಬಾವಿಯೊಳಗೆ ಮಂಗಳವಾರ ಪತ್ತೆಯಾಗಿದ್ದ ಮೊಸಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಬೀಡಿನ ಬಲೆಯನ್ನು ಬಾವಿ ಒಳಗೆ ಬಿಡುವುದರ ಮೂಲಕ ಸುರಕ್ಷಿತವಾಗಿ ಮೊಸಳೆಯನ್ನು ಬುಧವಾರ ಸೆರೆ ಹಿಡಿಯಲಾಗಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.ಬಾವಿಯೊಳಗೆ ಅವಿತುಕೊಂಡಿದ್ದ ಮೊಸಳೆಯನ್ನು ಜೀವಂತವಾಗಿ ಸೆರೆ ಹಿಡಿಯಲು ಮಂಗಳವಾರ ಬೊನ್ ಇಟ್ಟು ಹಲವು ಉಪಕ್ರಮಗಳನ್ನು ಬಳಕೆ ಮಾಡಿದ್ದರು ಯಾವುದೆ ರೀತಿ ಪ್ರಯೋಜನೆ ಆಗಿರಲಿಲ್ಲ.ಸಿಸಿಟಿವಿ ಮೂಲಕ ರಾತ್ರಿಯಿಡಿ ಮೊಸಳೆ ಚಲನವಲನದ ಬಗ್ಗೆ ನಿಗಾವನ್ನು ಇಡಲಾಗಿತ್ತು.ಸ್ಥಳೀಯ […]