ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಪ್ರಾಂಗಣ ಒಳ ಪ್ರವೇಶಿಸಿದ ನೆರೆ ನೀರು

ಕುಂದಾಪುರ:ಬುಧವಾರ ಸುರಿದ ಭಾರಿ ಮಳೆಗೆ ಬ್ರಹ್ಮಕುಂಡ ನದಿ ಉಕ್ಕಿ ಹರಿದ ಪರಿಣಾಮ ನೆರೆ ನೀರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಒಳಾಂಗಣವನ್ನು ಪ್ರವೇಶಿಸಿದೆ.ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಒಳಗೆ ನೀರು ನುಗ್ಗಿರುವುದು ಇದು ಎರಡನೇ ಬಾರಿ.

ಗಂಗೊಳ್ಳಿ:ಬೃಹತ್ ಗಾತ್ರದ ಹೆಬ್ಬಾವು ಸೆರೆ

ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಲೈಟ್‌ ಹೌಸ್ ಗದ್ದೆಮನೆ ನರಸಿಂಹ ಪೂಜಾರಿ ಅವರ ವಾಸ್ತವದ ಮನೆ ಸಮೀಪ ಸುಮಾರು 11 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವು ಬುಧವಾರ ಪತ್ತೆಯಾಗಿದೆ.ಜನವಸತಿ ಪ್ರದೇಶದಲ್ಲಿ ಅವಿತುಕೊಂಡಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿತಾರಣ್ಯದಲ್ಲಿ ಬಿಡಲಾಯಿತು.ಗಸ್ತು ಅರಣ್ಯ ಪಾಲಕ ಆನಂದ ಬಳೆಗಾರ ಮತ್ತು ಸ್ಥಳೀಯರಾದ ಗಣೇಶ ಖಾರ್ವಿ,ವಿಶ್ವನಾಥ ಗಂಗೊಳ್ಳಿಸುಂದರ.ಪಿ.ನಾಗೇಂದ್ರಮಡಿ ನಾಗರಾಜ ಖಾರ್ವಿ,ವಿಶ್ವನಾಥ ಪೂಜಾರಿ,ರತ್ನಾಕರ ಪೂಜಾರಿ ಸಂದೀಪ ಪೂಜಾರಿ,ರಾಜು ಪೂಜಾರಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ನಾವುಂದ ಸಾಲ್ಟುಡಕ್ಕೆ ಭೇಟಿ

ಕುಂದಾಪುರ:ನೆರೆ ಹಾವಳಿ ಯಿಂದ ತತ್ತರಿಸಿದ ಬೈಂದೂರು ತಾಲೂಕಿನ ನಾವುಂದ ಸಾಲ್ವುಡಕ್ಕೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಜಿಲ್ಲಾಪಂಚಾಯತ್‌ ಮಾಜಿ ಅಧ್ಯಕ್ಷ ರಾಜು ಪೂಜಾರಿ ಅವರು ಮಾಹಿತಿಯನ್ನು ನೀಡಿದರು.ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು,ಬೈಂದೂರು ಬ್ಲಾಕ್ ಅಧ್ಯಕ್ಷರು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.

You cannot copy content of this page