ಕಾರವಾರ:ಮುರಿದು ಬಿದ್ದ ಕಾಳಿ ಸೇತುವೆ,ಮುಂದುವರೆದ ಸೇತುವೆ ದುರ್ಘಟನೆ
ಕಾರವಾರ:ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಾರವಾರ ಮತ್ತು ಗೋವಾಕ್ಕೆ ಸಂಪರ್ಕಿಸುವ ಸುಮಾರು 40 ವರ್ಷಕ್ಕೂ ಹಳೆಯದಾದ ಕಾಳಿ ಸೇತುವೆ ಮಂಗಳವಾರ ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ಏಕಾಏಕಿ ಕುಸಿದು ಬಿದ್ದಿದೆ.ದೇಶಾದ್ಯಂತ ಸೇತುವೆ ಮುರಿದು ಬೀಳುವ ದುರ್ಘಟನೆ ಮುಂದುವರೆದಿದ್ದು ಜನರು ಆತಂಕಿತರಾಗಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕೋಡಿಭಾಗ್ ಬಳಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೃಹತ್ ಸೇತುವೆ ಯಾವುದೆ ರೀತಿಯ ಮುನ್ಸೂಚನೆ ಸಿಗದೆ ಇರುವ ರೀತಿಯಲ್ಲಿ ನದಿಗೆ ರಾತ್ರೋರಾತ್ರಿ ಉರುಳಿ ಬಿದ್ದಿದೆ.ಈ ವೇಳೆ ಸೇತುವೆ ಮೇಲೆ ಸಾಗುತ್ತಿದ್ದ […]