ಲಯನ್ ಆಸರೆ ಯೋಜನೆ ಮನೆ ನಿರ್ಮಾಣ ಅಶಕ್ತರಿಗೆ ನೆರವು ವಿತರಣೆ

ಮುಳ್ಳಿಕಟ್ಟೆ:ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಜೋನ್ 2 ರೀಜನ್ 6 ಡಿಸ್ಟ್ರಿಕ್ಟ್ 317 ಸಿವತಿಯಿಂದ ಲಯನ್ ಆಸರೆ ಯೋಜನೆ ಮನೆ ನಿರ್ಮಾಣ ಅಶಕ್ತರ ನೆರವಿಗೆ ಕಾರ್ಯಕ್ರಮ, ಸನ್ಮಾನ ಹಾಗೂ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮೇಳದವರಿಂದ ಯಕ್ಷಗಾನ ಕಾರ್ಯಕ್ರಮ ಮುಳ್ಳಿಕಟ್ಟೆ ನಗುಸಿಟಿ ಮೈದಾನದಲ್ಲಿ ಶನಿವಾರ ನಡೆಯಿತು. ಲಯನ್ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಅವರು ಫಲಾನುಭವಿಗಳಿಗೆ ಮನೆ ನಿರ್ಮಾಣದ ನೆರವು ಪತ್ರವನ್ನು ವಿತರಿಸಿ ಮಾತನಾಡಿ,ಸಂಘ ಸಂಸ್ಥೆಗಳ ಗುರಿ ದೈಯೋದ್ದೇಶ ಈಡೇರಿಕೆ ಆದಾಗ ಸಮಾಜಕ್ಕೆ ಒಳಿತಾಗಲಿದೆ.ಆ ನಿಟ್ಟಿನಲ್ಲಿಮಹಿಳೆಗೆ […]

ಅಧ್ಯಕ್ಷರಾಗಿ ಸತೀಶ್‌ ಶೆಟ್ಟಿ ಹಕ್ಲಾಡಿ ಆಯ್ಕೆ

ಕುಂದಾಪುರ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಂಡ್ ಆರ್‌ಚೀಟಿಕ್ಸ್ (ಸಿವಿಲ್ ಎಂಜಿನಿಯ‌ರ್ ಮತ್ತು ವಾಸ್ತುಶಿಲ್ಪಿಗಳ ಸಲಹಾ ಸಂಘ) ಕುಂದಾಪುರ ಇದರ ಮುಂದಿನ ಎರಡು ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಇಂಜಿನಿಯರ್ ಸತೀಶ್ ಶೆಟ್ಟಿ ಹಕ್ಲಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕಾರ್ಯದರ್ಶಿಯಾಗಿ ಇಂಜಿನಿಯರ್ ರವೀಂದ್ರ ಕೆ.ಕೋಶಾಧಿಕಾರಿಯಾಗಿ ಇಂಜಿನಿಯ‌ರ್ ಓಂ ಪ್ರಕಾಶ್ ಆಯ್ಕೆಯಾಗಿದ್ದಾರೆ.

ಕಾಪು:ಗೂಡ್ಸ್ ಟೆಂಪೋ ಪಲ್ಟಿ ನಾಲ್ವರು ಸಾವು

ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್ ಟೆಂಪೋ ಪಲ್ಟಿ ಹೊಡೆದು ಬಿದ್ದು, ನಜ್ಜುಗುಜ್ಜಾಗಿದೆ.ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು, ಮತ್ತಿಬ್ಬರು ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

You cannot copy content of this page