ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ,ಚಂಡಿಕಾ ಹೋಮ ಸಮರ್ಪಣೆ
ಕುಂದಾಪುರ:ಕರಸ್ಥಳ ಜಗದ್ಗುರು ಶ್ರೀ ನಾಗಲಿಂಗ ಸ್ವಾಮಿ ಹಾಗೂ ವಿಶ್ವಕರ್ಮೇಶ್ವರ ಸಾನಿಧ್ಯವಿರುವ ಉಪ್ರಳ್ಳಿ ಕಾಲಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಾನುವಾರ ನಡೆಯಿತು.
ಮೊದಲ ದಿನದ ನವರಾತಿ ಉತ್ಸವದ ಪ್ರಯುಕ್ತ ಉಪ್ರಳ್ಳಿ ಶ್ರೀಕಾಳಿಕಾಂಬಾ ದೇವರ ಸನ್ನಿಧಾನದಲ್ಲಿ ಜರುಗಿದ ಚಂಡಿಕಾ ಹೋಮವನ್ನು ದೇವಳದ ಆಡಳಿತ ಮೋಕ್ತೆಸರರಾದ ಚಂದ್ರಯ್ಯ ಆಚಾರ್ಯ ಕಳಿ ಅವರು ನೆರವೇರಿಸಿಕೊಟ್ಟರು.ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು,ಸದಸ್ಯರು,ಸಮಾಜ ಬಾಂಧವರು ಉಪಸ್ಥಿತರಿದ್ದರು.



























































































































































































































































































































































































































































































































































































































































































































































































































































































































































































































































































































































































































































































































































































































































































