ಶ್ರೀವಿನಾಯಕ ಆರ್ಕೇಡ್,ಶ್ರೀ ಮೂಕಾಂಬಿಕಾ ನಿಲಯ ಪ್ರವೇಶೋತ್ಸವ
ಬೈಂದೂರು:ತಾಲೂಕಿನ ನಾಯ್ಕನಕಟ್ಟೆಯಲ್ಲಿ ನೂತನವಾವಿ ನಿರ್ಮಿಸಿರುವ ಶ್ರೀವಿನಾಯಕ ಆರ್ಕೆಡ್ ಮತ್ತು ಶ್ರೀಮೂಕಾಂಬಿಕಾ ನಿಲಯ ಪ್ರವೇಶೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನದೊಂದಿಗೆ ಗುರುವಾರ ನಡೆಯಿತು.ಗಣಹೋಮ ಗಣಪತಿ ಪೂಜೆಯನ್ನು ನೆರವೇರಿಸಲಾಯಿತು.
ಶ್ರೀವಿನಾಯಕ ಆರ್ಕೇಡ್ ಮಾಲೀಕರಾದ ಬಾಬು ದೇವಾಡಿಗ ಅವರು ಮಾತನಾಡಿ,ಹೊಸ ಆಶಯದೊಂದಿಗೆ ನಿರ್ಮಿಸಿರುವ ಇವೊಂದು ವಾಣಿಜ್ಯ ಕಟ್ಟಡದ ಬೆಳವಣಿಗೆ ಗ್ರಾಮಸ್ಥರು ಮತ್ತು ಉದ್ಯಮಿಗಳು ಸಹಕಾರ ನೀಡಬೇಕೆಂದು ಕೇಳಿಕೊಂಡರು.
ಜಯರಾಮ ಶೆಟ್ಟಿ ಅವರು ಶ್ರೀವಿನಾಯಕ ಆರ್ಕೇಡ್ ವಾಣಿಜ್ಯ ಮಳಿಗೆ ಪ್ರವೇಶೋತ್ಸವಕ್ಕೆ ಶುಭಕೋರಿ ಮಾತನಾಡಿ,ಅತ್ಯಂತ ಸುಸಜ್ಜಿತವಾದ ರೀತಿಯಲ್ಲಿ ಕಟ್ಟಿಸಿರುವ ಇವೊಂದು ವಾಣಿಜ್ಯ ಮಳಿಗೆ ಇವೊಂದು ಭಾಗದಲ್ಲಿ ಉತ್ತಮ ರೀತಿಯಾದ ವ್ಯವಹಾರಿಕ ಕೇಂದ್ರವಾಗಿ ರೂಪಗೊಳ್ಳಲಿದೆ.ಊರಿನ ಅಭಿವೃದ್ಧಿಗೆ ವಾಣಿಜ್ಯ ಸಂಕೀರ್ಣಗಳು ತನ್ನದೆ ರೀತಿಯಲ್ಲಿ ಕೊಡುಗೆಯನ್ನು ನೀಡಲಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮತ್ತಿತರರು ಉಪಸ್ಥಿತರಿದ್ದರು.