ಕೆಸರಿನಲ್ಲೊಂದು ದಿನ ಸಾಂಪ್ರದಾಯಿಕ ಕ್ರೀಡಾ ಹಬ್ಬ
ಕುಂದಾಪುರ:ಟೀಮ್ ತ್ರಾಸಿ ವತಿಯಿಂದ ಕೆಸರಿನಲ್ಲೊಂದು ದಿನ ಸಾಂಪ್ರದಾಯಿಕ ಕ್ರೀಡಾ ಹಬ್ಬ ಕಾರ್ಯಕ್ರಮ ಇಪ್ಪಿಬೈಲು ಬೊಬ್ಬರ್ಯ ದೇವಸ್ಥಾನ ವಠಾರದ ಗದ್ದೆ ಬೈಲಿನಲ್ಲಿ ಭಾನುವಾರ ನಡೆಯಿತು.ಕೆಸರಿನಲ್ಲೊಂದು ದಿನ ಕ್ರೀಡಾ ಹಬ್ಬದ ಅಂಗವಾಗಿ ಪುರುಷರಿಗೆ,ಮಹಿಳೆಯರಿಗೆ,ಮಕ್ಕಳಿಗೆ ವೈವಿಧ್ಯಮಯವಾದ ಕ್ರೀಡೆಗಳನ್ನು ಆಯೋಜಿಸಲಾಯಿತು.ಟೀಮ್ ತ್ರಾಸಿ ಬಳಗದ ಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು.