ಸೌಪರ್ಣಿಕಾ ನದಿಯಲ್ಲಿ ಅಕ್ರಮ ಮರಳುಗಾರಿಕೆ:ಆರೋಪಿಗಳು ವಶಕ್ಕೆ
ಕುಂದಾಪುರ:ಯಾವುದೇ ರೀತಿ ಪರವಾನಗಿ ಪಡೆಯದೆ ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊವಾಡಿ ಗಂಡ್‍ಬೇರು ಸೌಪರ್ಣಿಕಾ ನದಿಯಲ್ಲಿ ತಡರಾತ್ರಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಆರೋಪಿಗಳಾದ ಆಲ್ಟನ್ ಆನಗೋಡು(42),ಉತ್ತರ ಪ್ರದೇಶ ರಾಜ್ಯದ ನಿವಾಸಿಗಳಾದ ಮೈನೇಜರ್ (30) ಮತ್ತು ದಿನೇಶ (22)ಜಿತೇಂದ್ರ ಕುಮಾರ್ (25),ಗುದ್ದು ಕುಮಾರ (20) ಎನ್ನುವ ವ್ಯಕ್ತಿಗಳನ್ನು ಗಂಗೊಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ರಾತ್ರಿ ಸಮಯದಲ್ಲಿ ಸೌಪರ್ಣಿಕಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎನ್ನುವ ಕ್ಲಪ್ತ ಮಾಹಿತಿ ಮೇರೆಗೆ ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್‍ಐ ಹರೀಶ್ ಆರ್ ನಾಯ್ಕ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ದಾಳಿ ನಡೆಸಿ ಮರಳುಗಾರಿಕೆಗೆ ಬಳಸುತ್ತಿದ್ದ ಅಂದಾಜು 2.ಲ್ಷಕ.ರೂ ಮೌಲ್ಯದ ಪ್ಲೈವುಡ್ ಪೈಬರ್ ಕೋಟ್ ದೋಣಿ 02 ಹಾಗೂ 2000.ರೂ ಮೌಲ್ಯದ ಪ್ಲಾಸ್ಟಿಕ್ ಬುಟ್ಟಿ 08,ಅಂದಾಜು 1,800.ರೂ ಮೌಲ್ಯದ ಕಬ್ಬಿಣದ ಬಕೆಟ್ 06,200.ರೂ ಮೌಲ್ಯದ ಮರದ ಹಲಗೆ,ಅಂದಾಜು 6000.ರೂ ಮೌಲ್ಯದ ಕಬ್ಬಿಣದ ಸ್ಟ್ಯಾಂಡ್ 01 ಮತ್ತು ಅಂದಾಜು 3,500.ರೂ ಮೌಲ್ಯದ ಒಂದು ಯೂನಿಟ್ ಮರಳು ಸಹಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.ಘಟನೆಯ ಸ್ಥಳದಲ್ಲಿ ಹಾಜರಿದ್ದ ಪಂಚರ ಸಮಕ್ಷಮ ಮಹಜರು ಮುಖೇನ ವಸ್ತುಗಳನ್ನು ಸ್ವಾಧೀನಪಡಿಸಿಕೊಂಡು ಕಾನೂನು ಕ್ರಮವನ್ನು ಪೆÇಲೀಸರು ಕೈಗೊಂಡಿದ್ದಾರೆ.ಈ ಸಂಬಂಧ ಪ್ರಕರಣ ದಾಖಲಾಗಿದೆ.