ದುಷ್ಟಶಕ್ತಿಗಳಿಂದ ರಕ್ಷಣೆ ಪಡೆಯಲು ಮಾರ್ಗದರ್ಶನ ಅಗತ್ಯ
ಕುಂದಾಪುರ:ಸಮಾಜದಲ್ಲಿ ಅಡಗಿರುವ ದುಷ್ಟಶಕ್ತಿಗಳಿಂದ ರಕ್ಷಣೆ ಪಡೆಯಲು ಹೆಣ್ಣು ಮಕ್ಕಳಿಗೆ ಮಾರ್ಗದರ್ಶನ,ತಿಳುವಳಿಕೆ ಹೆಚ್ಚು ಹೆಚ್ಚು ನೀಡುವ ಪ್ರಯತ್ನವನ್ನು ಸ್ವಸ್ಥ ಸಮಾಜ ಮಾಡಬೇಕೆಂದು ಸೇವಾ ಸಂಗಮ ಟ್ರಸ್ಟ್‍ನ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ ಹೇಳಿದರು.
ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಆಶ್ರಯದಲ್ಲಿ ಗಂಗೊಳ್ಳಿ ಎಸ್.ವಿ.ಪದವಿಪೂರ್ವ ಕಾಲೇಜಿನ ರೋಟರಿ ಒಳಾಂಗಣದಲ್ಲಿ ಭಾನುವಾರ ನಡೆದ ಕಿಶೋರಿ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು.ಶಿಶು ಮಂದಿರದ ಅಧ್ಯಕ್ಷ ಬಿ.ರಾಘವೇಂದ್ರ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಉಷಾ ಪಿ.ಮಡಿವಾಳ ಉದ್ಘಾಟಿಸಿದರು,ರಾಮಪ್ರಸಾದ್ ಹರಿಹರಪುರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.ಶಶಿಕಲಾ,ಶಿಶು ಮಂದಿರದ ಸಂಚಾಲಕ ಡಾ.ಕಾಶೀನಾಥ ಪೈ,ಕಾರ್ಯದರ್ಶಿ ಅಶ್ವಿತಾ ಜಿ.ಪೈ,ಮಾತಾಜಿ ಪ್ರೇಮಾ,ರತ್ನಾ ಉಪಸ್ಥಿತರಿದ್ದರು.ಬಿ.ರಾಘವೇಂದ್ರ ಪೈ ಸ್ವಾಗತಿಸಿದರು.ಶ್ರೀನಿವಾಸ ಎಂ,ಸವಿತಾ ಯು.ದೇವಾಡಿಗ,ವಸಂತಿ ಎನ್.ಖಾರ್ವಿ ಸಹಕರಿಸಿದರು.ಬಿ.ಲಕ್ಷ್ಮೀಕಾಂತ ಮಡಿವಾಳ ನಿರ್ವಹಿಸಿದರು.























































































































































































































































































































































































































































































































































































































































































































































































































































































































































































































































































































































































































































































































































































































































































