ಜನತಾ ದಿಬ್ಬಣ 2ಕೆ24 ಪ್ರತಿಭಾ ದಿನಾಚರಣೆ ಕಾರ್ಯಕ್ರಮ

Share

Advertisement
Advertisement

ಕುಂದಾಪುರ:ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರ ಹೊಮ್ಮಲು ಇಂತಹ ಕಾರ್ಯಕ್ರಮಗಳು ಬಹಳಷ್ಟು ಸಹಕಾರಿ ಯಾಗಲಿದೆ ಎಂದು ಅಂತರಾಷ್ಟ್ರೀಯ ಜಾದುಗಾರ ಸಾಹಿತಿ ಓಂ ಗಣೇಶ್ ಉಪ್ಪುಂದ ಹೇಳಿದರು.
ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ವತಿಯಿಂದ ಕುಂದಾಪುರ ಮೊಗವೀರ ಭವನದಲ್ಲಿ ಶುಕ್ರವಾರ ನಡೆದ ಜನತಾ ದಿಬ್ಬಣ 2ಕೆ24 ಪ್ರತಿಭಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಪ್ರಿನ್ಸಿಪಾಲ್ ಗಣೇಶ ಮೊಗವೀರ ಮಾತನಾಡಿ,ನಿರಂತರ ಪಾಠ ಪ್ರವಚನಗಳಿಂದ ನಾಲ್ಕು ಗೋಡೆಗಳ ಮಧ್ಯದಲ್ಲಿ ಬಸವಳಿಯುವ ಎಳೆಯ ಮನಸುಗಳು ಚೈತನ್ಯದಿಂದ ಕೂಡಿರಬೇಕು ಎನ್ನುವ ಉದ್ದೇಶದಿಂದ ಇವೊಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದದರು.
ಗಾಯಕಿ ವಿಜಯಲಕ್ಷ್ಮಿ ಮೆಟ್ಟಿನಹೊಳೆ,ಜನತಾ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಂಜು ಕಾಳಾವರ,ಜನತಾ ನ್ಯೂ ಇಂಗ್ಲೀμï ಮೀಡಿಯಂ ಸ್ಕೂಲ್ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ,ಕಾಲೇಜಿನ ಬೋಧಕ,ಬೋಧಕೇತರ ವೃಂದದವರು,ವಿದ್ಯಾರ್ಥಿಗಳು,ಪೆÇೀಷಕರು ಉಪಸ್ಥಿತರಿದ್ದರು.ಉಪನ್ಯಾಸಕ ಉದಯ ನಾಯ್ಕ ನಿರೂಪಿಸಿದರು,ವೈಸ್ ಪ್ರಿನ್ಸಿಪಾಲ್ ರಮೇಶ ಪೂಜಾರಿ ವಂದಿಸಿದರು.ಕಾಲೇಜಿನ ವಿವಿಧ ತಂಡಗಳಿಂದ ಪ್ರತಿಭಾ ಪ್ರದರ್ಶನ ಜರುಗಿತು.ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾತಯಿತು.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page