ಶ್ರೀ ಕ್ಷೇತ್ರ ಕಾನ್‍ಬೇರು ಹೊಸೂರು,ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವಿಜಯದಶಮಿ ಸಂಭ್ರಮ
ಕುಂದಾಪುರ:ಶ್ರೀ ಕ್ಷೇತ್ರ ಕಾನ್‍ಬೇರು ಹೊಸೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವಿಜಯ ದಶಮಿ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಶನಿವಾರ ನಡೆಯಿತು.
ವಿಜಯ ದಶಮಿ ಉತ್ಸವದ ಅಂಗವಾಗಿ ಶ್ರೀ ದೇವಿಯ ಸನ್ನಿಧಾನದಲ್ಲಿ ಚಂಡಿಕಾ ಹೋಮ,ದುರ್ಗಾ ಹೋಮ ಮತ್ತು ವಿಶೇಷ ಪೂಜೆ.ಸಂಜೆ 5 ರಿಂದ ಶ್ರೀ ದೇವಿಯ ಕಲ್ಪೋಕ್ತ ಪೂಜೆ,ಸಹಸ್ರ ನಾಮಾರ್ಚನೆ,ಚಂಡಿಕಾ ಸಪ್ತಶತಿ ಪಾರಾಯಣ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮ,ಅನ್ನದಾನ ಸೇವೆ ನಡೆಯಿತು.
ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀದೇವರ ಪ್ರಸಾದ ಸ್ವೀಕರಿಸಿದರು.
ಸೇವಾಕರ್ತರಾದ ಚಂದ್ರಶೇಖರ ಶೆಟ್ಟಿ ಮತ್ತು ನಾಗರತ್ನ ಹಾಗೂ ಜಯರಾಮ ಶೆಟ್ಟಿ ಕಾನ್ ಬೇರು ಅವರು ಶ್ರೀ ಮಹಿಷಮರ್ದಿನಿ ದೇವಿಗೆ ಚಂಡಿಕಾ ಹೋಮವನ್ನು ಸಲ್ಲಿಸಿದರು.
ಉದ್ಯಮಿಗಳಾದ ಚಂದ್ರಶೇಖರ್ ಶೆಟ್ಟಿ ಕಾನ್ ಬೇರು ಮಾತನಾಡಿ,ನಾವು ಆರಂಭಿಸುವ ಪ್ರತಿಯೊಂದು ಕೆಲಸದ ಮೊದಲು ತಾಯಿ ಮಹಿಷಮರ್ದಿನಿ ದೇವಿಯನ್ನು ನೆನೆದು ಕೊಂಡ ಮೇಲೆಯೇ ಮುಂದಿನ ಹೆಜ್ಜೆಯನ್ನು ಇಡುತ್ತೇವೆ.ಅಮ್ಮನವರನ್ನು ನಂಬಿದವರು ಹಾಳಾಗಿದ್ದ ಉದಾಹರಣೆಗಳೆ ಇಲ್ಲಾ.ಶಕ್ತಿ ಸ್ವರೂಪಿಣಿಯಾಗಿದ್ದಾಳೆ.ಶ್ರೀ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿ ಉತ್ಸವ ಬಹಳಷ್ಟು ವಿಜೃಂಭಣೆಯಿಂದ ನಡೆದಿದೆ.ತಾಯಿ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಶುಭಹಾರೈಸಿದರು.
ಸಮಿತಿ ಉಪಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಮಕ್ಕಿಮನೆ ಮಾತನಾಡಿ,ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಬಹಳಷ್ಟು ವಿಜೃಂಭಣೆಯಿಂದ ಸಂಪ್ರದಾಯ ಬದ್ಧವಾಗಿ ನಡೆದಿದೆ.ಶ್ರೀ ದೇವಿಗೆ ಭಕ್ತರು ಚೆಂಡಿಕಾಹೋಮ ಸಹಿತ ಅನ್ನದಾನ ಸೇವೆಯನ್ನು ಸಮರ್ಪಿಸಿದ್ದಾರೆ.ತಾಯಿ ಸೇವಾಕರ್ತರಿಗೂ, ಗ್ರಾಮಸ್ಥರಿಗೂ ಆಯುಷ್ಯ, ಆರೋಗ್ಯ ಸಂಪತ್ತನ್ನು ಕೊಟ್ಟು ಹರಸಲಿ ಎಂದು ಬೇಡಿಕೊಂಡರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು, ಸದಸ್ಯರು,ಭಕ್ತರು,
ಗ್ರಾಮಸ್ಥರು ಉಪಸ್ಥಿತರಿದ್ದರು.