ನಾವುಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನರಸಿಂಹ ದೇವಾಡಿಗ ಆಯ್ಕೆ
ಬೈಂದೂರು:ನಾವುಂದ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಪಂಚಾಯತಿ ಸದಸ್ಯ ನರಸಿಂಹ ದೇವಾಡಿಗ ಅವರು ಆಯ್ಕೆಯಾಗಿದ್ದಾರೆ.ಬಿಜೆಪಿ ಪಕ್ಷದ ಬೆಂಬಲಿತ ಪಂಚಾಯತಿ ಸದಸ್ಯೆ ಸುಲೋಚನಾ ಗಾಣಿಗ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಕಾಂಗ್ರೆಸ್ ಪಕ್ಷದ 12 ಸದಸ್ಯರು ಮತ್ತು ಬಿಜೆಪಿ ಪಕ್ಷದ 03 ಸದಸ್ಯರೊಳಗೊಂಡ ನಾವುಂದ ಗ್ರಾಮ ಪಂಚಾಯತಿಯಲ್ಲಿ ಒಟ್ಟು 15 ಪಂಚಾಯತಿ ಸದಸ್ಯರಿದ್ದಾರೆ.ಕಾಂಗ್ರೆಸ್ ಪಕ್ಷದ ಸದಸ್ಯರ ಬೆಂಬಲದೊಂದಿಗೆ 08 ಮತಗಳನ್ನು ಪಡೆದ ಬಿಜೆಪಿ ಪಕ್ಷದ ಅಭ್ಯರ್ಥಿ ಸುಲೋಚನಾ ಗಾಣಿಗ ಅವರು ಪ್ರತಿಸ್ಪರ್ಥಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾರದ ಪೂಜಾರಿ ಅವರಿಗಿಂತ 1 ಅಧಿಕ ಮತವನ್ನು ಪಡೆದು ಉಪಾಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದರು.ಸದಸ್ಯರ ಕೊರಂ ಕೊರತೆ ಇದ್ದರು ಉಪಾಧ್ಯಕ್ಷ ಹುದ್ದೆಯನ್ನು ಪಡೆದುಕೊಳ್ಳಲು ಬಿಜೆಪಿ ಪಕ್ಷ ಯಶಸ್ವಿಯಾಗಿದೆ.