ಗಂಗೊಳ್ಳಿ :ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯಲ್ಲಿ ಸಂಭ್ರಮದ ವಾರ್ಷಿಕೋತ್ಸವ ಆಚರಣೆ
ಕುಂದಾಪುರ:ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಮಂಗಳವಾರ ನಡೆಯಿತು.
ಜಂಟಿ ಕಾರ್ಯದರ್ಶಿ ಭಗಿನಿ ಅವರು ಅಧ್ಯಕ್ಷತೆ ವಹಿಸಿ ಡಯಾನ ರವರು ಮಾತನಾಡಿ,ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಇಲ್ಲಿನ ಮುಖ್ಯ ಶಿಕ್ಷಕರು ಮತ್ತು ಶಿಕ್ಷಿಯರ ಶ್ರಮ ಮಹತ್ವದ್ದಾಗಿದೆ ಎಂದು ಶ್ಲಾಘಿಸಿದರು. 2023-24 ಸಾಲಿನ ಎಸ್. ಎಸ್. ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ,ರಾಜ್ಯ,ಜಿಲ್ಲಾ, ತಾಲೂಕು ಮಟ್ಟದ ಕ್ರೀಡಾ ಸಾಧಕರಿಗೆ ಮತ್ತು ರಾಜ್ಯ ಪುರಸ್ಕಾರ ಪಡೆದ ಗೈಡ್ಸ್ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಸ್ಥಳೀಯ ಚರ್ಚಿನ ಧರ್ಮ ಗುರುಗಳಾದ ಪೂಜ್ಯ ರೋಷನ್ ಥಾಮಸ್ ಡಿ.ಸೋಜಾ,ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಯುತ ಮಿಲ್ಟನ್ ಕ್ರಾಸ್ತಾ,ಶಾಲೆಯ ಹಳೆ ವಿದ್ಯಾರ್ಥಿ ಡಾ. ಸಂಧ್ಯಾ,ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಭಗಿನಿ. ಡೋರಿನ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಪ್ರಮಿತಾ ಉಪಸ್ಥಿತರಿದ್ದರು.
ಶಿಕ್ಷಕಿ ಶಾಂತಿ ಕಾರ್ಯಕ್ರಮದ ನಿರೂಪಣೆ ಮಾಡಿದರು.ಮುಖ್ಯೋಪಾಧ್ಯಾಯನಿ ಭಗಿನಿ.ಕ್ರೆಸೆನ್ಸ್ ಶಾಲೆಯ ವಾರ್ಷಿಕ ಶೈಕ್ಷಣಿಕ ವರದಿಯನ್ನು ವಾಚಿಸಿದರು.
ಜುನಿತಾ ಧನ್ಯವಾದ ಸಮರ್ಪಣೆ ಮಾಡಿದರು.ವಿದ್ಯಾರ್ಥಿಗಳಿಂದ ರೂಪಕ,ಜಾನಪದ ನೃತ್ಯ, ವಿವಿಧ ವೈವಿಧ್ಯಮಯ ನೃತ್ಯಗಳು,ಹೋಲ್ ಇನ್ ದ ಸೋಕ್’ ಎಂಬ ಇಂಗ್ಲಿಷ್ ಪ್ರಹಸನ,ಕರ್ಮ ರಿಟರ್ನ್ಸ್’ ಕನ್ನಡ ನಾಟಕ ಮುಂತಾದ ಕಾರ್ಯಕ್ರಮಗಳು ಜರುಗಿತು.
ಶಾಲಾ ಹಳೆ ವಿದ್ಯಾರ್ಥಿ ಕಾರ್ತಿಕ್ ಬಿ.ಖಾರ್ವಿ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸ್ವಾಗತ ನೃತ್ಯದ ಮೂಲಕ ಅತಿಥಿಗಳನ್ನು ಸ್ವಾಗತಿಸಲಾಯಿತು.ಭಗಿನಿ ಆನೆಟ್ ಅತಿಥಿ ಗಣ್ಯರನ್ನು ಸ್ವಾಗತಿಸಿದರು.