ಸಿಡಿಲು ಬಡಿದು ಮೂರು ಮಹಿಳೆಯರಿಗೆ ಗಾಯ
ಮಂಗಳೂರು:ಹುಲ್ಲು ಕೊಯ್ಯಲು ಹೋಗಿದ್ದ ಮೂವರು ಮಹಿಳೆಯರಿಗೆ ಸಿಡಿಲು ಬಡಿದ ಪರಿಣಾಮ ಗಾಯಗೊಂಡ ಘಟನೆ ಕೊಡಂಬೆಟ್ಟು ಗ್ರಾಮದಲ್ಲಿ ನಡೆದಿದೆ.ಗಾಯಾಳುಗಳನ್ನು
ಬಂಟ್ವಾಳ ಆಸ್ಪತ್ರೆಗೆ ದಾಖಲಾಲು ಮಾಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಕೊಡಂಬೆಟ್ಟು ಗ್ರಾಮದ ಸುಬ್ಬೊಟ್ಟು ನಿವಾಸಿಯಾದ ಅನಿತಾ ಪೂಜಾರಿ ಮತ್ತು ರಾಮಯ್ಯ ಗುರಿ ನಿವಾಸಿಯಾದ ಲೀಲಾವತಿ ಹಾಗೂ ಮೋಹಿನಿ ಎನ್ನುವವರಿಗೆ ಸಿಡಿಲು ಬಡಿದಿದೆ.