ಹಟ್ಟಿಯಂಗಡಿ:ಧಾರ್ಮಿಕ ಸಭಾ ಕಾರ್ಯಕ್ರಮ ಮಹಾ ಅನ್ನಸಂತರ್ಪಣೆ

Share

Advertisement
Advertisement

ಕುಂದಾಪುರ:ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಇದರ ನೂತನ ದೇವಾಲಯ ಲೋಕಾರ್ಪಣೆ ಬ್ರಹ್ಮಕಲಶೋತ್ಸವ ,ಲಕ್ಷ ಮೋದಕ ಹವನ,
ಶತ ಚಂಡಿಯಾಗ,2016 ಕಾಯಿ ಗಣಹೋಮ ಕಾರ್ಯಕ್ರಮದ ಅಂಗವಾಗಿ ಬುಧವಾರ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಆಶೀರ್ವಚನ ನೀಡಿ ಮಾತನಾಡಿ,ಕಾರವಳಿಯಲ್ಲಿರುವ ಅನೇಕ ಸನ್ನಿಧಾನಗಳು ಭಕ್ತರಿಗೆ ಭಕ್ತಿಯ ಸಿಂಚನವನ್ನು ಮಾಡುತ್ತಿವೆ.ನಮ್ಮ ಅನೇಕ ಸಿದ್ಧಾಂತಗಳು ಆಸ್ತಿಕ ಮನೋಭಾವನೆಗಳನ್ನು ಮೂಡಿಸುತ್ತವೆ.ನಾವು ಧರ್ಮ ಮಾರ್ಗ ದಿಂದ ನಡೆದರೆ ಮಾತ್ರ ನಮಗೆ ಯಶಸ್ಸು ಸಾಧ್ಯ‌ ಎಂದರು.
ಭಗವಂತನ ಮೇಲೆ ನಮಗೆ ಭಕ್ತಿ ಇದ್ದಾಗ ಮಾತ್ರ ಧರ್ಮ ಮಾರ್ಗದಲ್ಲಿ ನಡೆಯಬಹುದು. ನಾವು ಯಾರ ಕಣ್ಣೂ ತಪ್ಪಿಸುವುದಕ್ಕೆ ಸಾಧ್ಯ ಆದರೆ ಭಗವಂತನ ಕಣ್ಣೂ ತಪ್ಪಿಸಲಾಗದು.ಧಾರ್ಮಿಕ ಪ್ರಜ್ಞೆಯೊಂದಿಗೆ ನಮ್ಮ ಬದುಕು ಇರಬೇಕು ಎಂದು ಹೇಳಿದರು.

Advertisement

ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹಾಗೂ ಬಸರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬೀ. ಅಪ್ಪಣ್ಣ ಹೆಗಡೆ ಮಾತನಾಡಿ,ನಾವು ಇಂದು ಹಣದ ಹಿಂದೆ ಬಿದ್ದಿರುವುದು ಧಾರ್ಮಿಕ ಶ್ರದ್ಧೆ ಕಡಿಮೆಯಾಗಲು ಕಾರಣವಾಗಿದೆ.ಸಂಸ್ಕಾರ ಇಲ್ಲದೆ ಇರುವುದರಿಂದ ಕುಟುಂಬದಲ್ಲಿ ಭಿನ್ನ ಭಿನ್ನ ವಾತಾವರಣ ಕಾಣುತ್ತಿದ್ದೇವೆ.ಧರ್ಮ ಪ್ರಜ್ಞೆ ಮೂಡಿಸುವ ಮೂಲಕ ಸಮಾಜದಲ್ಲಿ ಸಂಸ್ಕಾರ, ಸಂಸ್ಕೃತಿ ಮೂಡಿಸಬೇಕಾಗಿದೆ ಎಂದು ಕರೆ ನೀಡಿದರು.
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಕೆ. ಸೂರ್ಯನಾರಾಯಣ ಉಪಾಧ್ಯಾಯ ಮಾತನಾಡಿ ಋಷಿಮುನಿಗಳ ಅನುಗ್ರಹದಿಂದ ನಮಗೆ ಈ ಒಂದು ಧಾರ್ಮಿಕ ಕ್ಷೇತ್ರಗಳು ದೊರಕಿವೆ.ನಾವು ಮಾಡುವ ಉತ್ತಮ ಕಾರ್ಯ,ಧರ್ಮ ಕಾರ್ಯ,ಸತ್ಕಾರ್ಯ ಗಳು ನಮಗೆ ಪರಲೋಕದಲ್ಲಿ ಲಭ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ದಿ ಶೈಕ್ಷಣಿಕ ಪ್ರತಿಷ್ಟಾನದ ಅಧ್ಯಕ್ಷ ಎಲ್. ಟಿ. ತಿಮ್ಮಪ್ಪ ವಹಿಸಿದ್ದರು. ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮದ ಅಧ್ಯಕ್ಷ ಡಾ ಕೆ.ಎಸ್.ಕಾರಂತ,ಅತಿಶಯ ಜೈನ ಕ್ಷೇತ್ರದ ಮೊಕ್ತೇಸರ ಸುರೇಂದ್ರ ಜೈನ್, ಲೋಕನಾತೇಶ್ವರ ದೇವಸ್ಥಾನದ ಧರ್ಮದರ್ಶಿ ಸನತ್ ಕುಮಾರ್ ರೈ ಮಾತನಾಡಿ ಶುಭ ಹಾರೈಸಿದರು.ದೇವಸ್ಥಾನದ ಧರ್ಮದರ್ಶಿ ವೇ.ಮೂ.ಬಾಲಚಂದ್ರ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ ಹಲವರ ಉಪಕಾರ ಸ್ಮರಿಸಿದರು.ವೇದಿಕೆಯಲ್ಲಿ ಉದ್ಯಮಿ ಕರುಣಾಕರ ಶೆಟ್ಟಿ,ಶ್ರೀ ಸಿದ್ದಿ ಶೈಕ್ಷಣಿಕ ಪ್ರತಿಷ್ಟಾನದ ಕಾರ್ಯದರ್ಶಿ ಶರಣ ಕುಮಾರ್, ಸುಭಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀ ಸಿದ್ಧಿವಿನಾಯಕ ಶಾಲೆಯ ಉಪ ಪ್ರಾಂಶುಪಾಲ ರಾಮ ದೇವಾಡಿಗ ನಿರ್ವಹಿಸಿದರು. ರಾಧಾಕೃಷ್ಣ ಭಟ್ಟ ಭಟ್ಕಳ ವಂದಿಸಿದರು.

Advertisement
Advertisement


Share

Leave a comment

Your email address will not be published. Required fields are marked *

You cannot copy content of this page