ಲಂಚಕ್ಕೆ ಬೇಡಿಕೆ ಇಟ್ಟಿದ್ದ ಲೈನ್ ಮ್ಯಾನ್: ಲೋಕಾಯುಕ್ತ ಬಲೆಗೆ
ಬೈಂದೂರು:ಮನೆ ಪಕ್ಕದಲ್ಲಿದ್ದ ಅಪಾಯಕಾರಿ ಮರವನ್ನು ತೆರವು ಮಾಡ ಬೇಕಾಗಿರುವುದರಿಂದ ಮರದ ಸಮೀಪ ಹಾದು ಹೋಗಿರುವ ವಿದ್ಯುತ್ ಲೈನ್ ಸಂಪರ್ಕ ಕಡಿತ ಮಾಡಬೇಕೆಂದು ಲೈನ್ ಮ್ಯಾನ್ ಬಳಿ ವ್ಯಕ್ತಿ ಕೇಳಿಕೊಂಡಾಗ,ವಿದ್ಯುತ್ ಸಂಪರ್ಕ ಕಡಿತಕ್ಕೆ ಮೊದಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಲೈನ್‍ಮ್ಯಾನ್ ರಮೇಶ್ ಬಡಿಗೇರ್ ಲೋಕಯುಕ್ತ ಬಲೆಗೆ ಬಿದ್ದ ಘಟನೆ ಬೈಂದೂರು ತೊಂಡೆಮಕ್ಕಿಯಲ್ಲಿ ನಡೆದಿದೆ.
ಮನೆ ಪಕ್ಕದಲ್ಲಿದ್ದ ಮರವನ್ನು ಕಡಿಯಲು ವಿದ್ಯುತ್ ಲೈನ್‍ನಿಂದ ತೊಂದರೆ ಆಗುತ್ತಿರುವುದರಿಂದ ವಿದ್ಯುತ್ ಸಂಪರ್ಕ ಕಡಿತಕ್ಕೆ ಮನೆ ಯಾಜಮಾನಿ ಮನವಿ ಮಾಡಿಕೊಂಡಿದ್ದ ಸಂದರ್ಭ ಲೈನ್‍ಮ್ಯಾನ್ ರಮೇಶ್ 2000.ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.ಲಂಚ ಪಡೆಯುತ್ತಿದ್ದ ಸಮಯದಲ್ಲಿ ಮಂಗಳೂರು ವಿಭಾಗದ ಲೋಕಾಯುಕ್ತ ಪೆÇಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

























































































































































































































































































































































































































































































































































































































































































































































































































































































































































































































































































































































































































































































































































































































































































