ರಾಜಗೋಪುರ ಪುನರ್ ನವೀಕರಣ,ಕಲಶ ಪ್ರತಿಷ್ಠೆ
ಕುಂದಾಪುರ:ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ ರಾಜಗೋಪುರ ಪುನರ್ ನವೀಕರಣ ಮತ್ತು ಕಲಶ ಪ್ರತಿಷ್ಠೆ ಕಾರ್ಯಕ್ರಮ ಕೆಪಿ ಕುಮಾರ ಗುರು ತಂತ್ರಿಗಳು ಮತ್ತು ದೇವಳದ ಅರ್ಚಕರ ನೇತೃತ್ವದಲ್ಲಿ ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ಶುಕ್ರವಾರ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ,ಜೀರ್ಣೋದ್ಧಾರ ಸಮಿತಿ,ಮಹಿಳಾ ಮಂಡಳಿ ಸದಸ್ಯರು,ದೇವಸ್ಥಾನದ ದೈವ ಪಾತ್ರಿಗಳು ಉಪಸ್ಥಿತರಿದ್ದರು.