ಶ್ರೀವರಾಹ ದೇವರಿಗೆ ಸೀಯಾಳ ಅಭಿಷೇಕ
ಬೈಂದೂರು:ಮಳೆರಾಯ ಮುನಿಸಿಕೊಂಡಿದ್ದರಿಂದ ಭತ್ತ ಬೆಳೆಗೆ ಕಂಟಕ ಎದುರಾದ ಹಿನ್ನೆಲೆಯಲ್ಲಿ ಉತ್ತಮ ಮಳೆ ಆಗಲಿ ಎಂದು ಪ್ರಾರ್ಥಿಸಿ ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಹಾ ದೇವರಿಗೆ ಮರವಂತೆ ಗ್ರಾಮಸ್ಥರು ಸಹಸೃ ಸೀಯಾಳ ಅಭಿಷೇಕವನ್ನು ಭಾನುವಾರ ನೆರವೇರಿಸಿದರು.ಈ ಸಂದರ್ಭದಲ್ಲಿ ಮರವಂತೆ ದೇವಳದ ಆಡಳಿತ ಸಮಿತಿ ಅಧ್ಯಕ್ಷರು,ಮರವಂತೆ ಗ್ರಾಮಸ್ಥರು,ಅರ್ಚಕರು,ಸಿಬ್ಬಂದಿಗಳು ಉಪಸ್ಥಿತರಿದ್ದರು.