ಕೋಡಿ ಬೀಚ್ ನಲ್ಲಿ ಸಹೋದರಿಬ್ಬರು ನೀರಿನಲ್ಲಿ ಮುಳುಗಿ ಸಾವು,ಒಬ್ಬನ ರಕ್ಷಣೆ

Share

Advertisement
Advertisement

ಕುಂದಾಪುರ:ಕೋಡಿ ಬೀಚ್‍ನಲ್ಲಿ ಈಜಲು ತೆರಳಿದ್ದ ಸಿದ್ದಾಪುರ ಸಮೀಪದ ಅಂಪಾರು ಮೂಡುಬಗೆ ನಿವಾಸಿಯಾಗಿರುವ ಧನರಾಜ್ (23) ವರ್ಷ,ದರ್ಶನ್ (18) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.ಧನುಷ್ (20) ಪ್ರಾಣಾಪಾಯದಿಂದ ಪಾರಾಗಿದ್ದು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಕ್ಷಣೆಗೆ ಒಳಪಟ್ಟ ಯುವಕ ಸಹಿತ,ಮೃತಪಟ್ಟ ಯುವಕರಿಬ್ಬರು ಒಂದೇ ತಾಯಿಯ ಮಕ್ಕಳಾಗಿದ್ದಾರೆ,ಕಂಪನಿಯಲ್ಲಿ ಉದ್ಯೋಗದಲ್ಲಿರುವ ಇವರು ಮಧ್ಯಾಹ್ನ ಸಮಯದಲ್ಲಿ ಕೋಡಿ ಬೀಚ್ಗೆ ತೆರಳಿದ್ದಾರೆ ಎನ್ನಲಾಗಿದೆ.ಶನಿವಾರ ಸಂಜೆ ಕುಟುಂಬ ಸಮೇತರಾಗಿ ಕೋಡಿ ಬೀಚ್ ಗೆ ಬಂದಿದ್ದು ಇವರು ಸಮುದ್ರದಲ್ಲಿ ಸ್ನಾನಕ್ಕೆ ಇಳಿದ ಸಂದರ್ಭ ಕಡಲ ಅಲೆಗೆ ಈ ಮೂವರು ಸಹೋದರರು ಕೊಚ್ಚಿಕೊಂಡು ಹೋಗಿದ್ದು ತಕ್ಷಣ ಸ್ಥಳೀಯರು ಓರ್ವ ನನ್ನು ರಕ್ಷಿಸಿದ್ದಾರೆ.
ಆದರೆ ಇಬ್ಬರು ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟಿರುತ್ತಾರೆ.
ಇಬ್ಬರ ಮೃತದೇಹವನ್ನು ಸ್ಥಳೀಯರು ಸಮುದ್ರದಿಂದ ಮೇಲಕ್ಕೆ ತಂದಿದ್ದಾರೆ.ನಿರಂತರವಾಗಿ ಕೋಡಿ ಬೀಚ್‍ನಲ್ಲಿ ಪ್ರಕರಣಗಳು ಮರುಕಳಿಸುತ್ತಾ ಇದ್ದು.ಜೀವಕ್ಕೆ ಕಂಟಕವಾಗಿರುವ ಕೋಡಿ ಬೀಚ್‍ನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page