ಕಾರು ಮತ್ತು ಲಾರಿ ನಡುವೆ ಅಪಘಾತ,ಐದು ಜನರಿಗೆ ಗಂಭೀರ ಗಾಯ
ಬೈಂದೂರು:ತಾಲೂಕಿನ ನಾವುಂದ ಅರೆಹೊಳೆ ಕ್ರಾಸ್‍ನಲ್ಲಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐದು ಜನರು ಗಂಭೀರ ಸ್ವರೂಪದ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ನಡೆದಿದೆ.
ಕುಂದಾಪುರ ಕಡೆಯಿಂದ ಗೋಕರ್ಣ ಕಡೆಗೆ ಸಾಗುತ್ತಿದ್ದ ಕಾರು ಅದೆ ಮಾರ್ಗದಲ್ಲಿ ಬೈಂದೂರು ಕಡೆಗೆ ಸಾಗುತ್ತಿದ್ದ ಲಾರಿ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸ್ಟೇಟ್‍ಬ್ಯಾಂಕ್ ಉದ್ಯೊಗಿಗಳಾದ ಚಿಕ್ಕಮಗಳೂರಿನ ನಿವಾಸಿ ಪ್ರತಾಪ,ಪ್ರೇಮ,ಪ್ರಜ್ವಲ್ ಅಂತೋನಿ,ಸುರೇಶ ಆಂಧ್ರಪ್ರದೇಶ,ವಿಘ್ನೇಶ ಹಟ್ಟಿಕುದ್ರು ಕುಂದಾಪುರ ಅವರು ಗಂಭೀರ ಸ್ವರೂಪದ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.ಕಿರಿಮಂಜೇಶ್ವರ 108 ವಾಹನದ ಸಿಬ್ಬಂದಿಗಳು ಮತ್ತು ಆಂಬ್ಯುಲೆನ್ಸ್ ಗಂಗೊಳ್ಳಿ ಇಬ್ರಾಹಿಂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.ಭಾನುವಾರ ವಿಪರಿತ ಕಾರ್ಯಕ್ರಮಗಳು ಕುಂದಾಪುರ ಮತ್ತು ಬೈಂದೂರು ಭಾಗದಲ್ಲಿ ನಡೆದಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾದ ವಾಹನದ ದಟ್ಟಣೆಯೆ ಇವೊಂದು ಅಪಘಾತ ಸಂಭವಿಸಲು ಕಾರಣವಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.