ಪ್ರತಿಕೋದ್ಯಮ ವಿಭಾಗ ಮುಖ್ಯಸ್ಥ ಭಾಸ್ಕರ್ ಹೆಗ್ಡೆ ಪತ್ನಿ ಹೃದಯಾಘಾತದಿಂದ ಸಾವು
ಮಂಗಳೂರು:ಉಜಿರೆ ಎಸ್.ಡಿ.ಎಂ. ಕಾಲೇಜು ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಭಾಸ್ಕರ್ ಹೆಗ್ಡೆ ಅವರ ಪತ್ನಿ ಸುವರ್ಣಾ ಹೆಗ್ಡೆ (49) ಹೃದಯಾಘಾತದಿಂದ ಉಜಿರೆ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.ಮೂಲತಃ ಹೊನ್ನಾವರದ ನಿವಾಸಿ ಆದ ಅವರು ಪ್ರಸ್ತುತ ಉಜಿರೆ ಉಂಡ್ಯಾಪು ನಗರದಲ್ಲಿ ನೆಲೆಸಿದ್ದರು.ಸುವರ್ಣಾ ಹೆಗ್ಡೆ ಅವರು ಮನೆಯಲ್ಲಿ ಕುಸಿದು ಬಿದ್ದಿದ್ದು,ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.ಅದಾಗಲೆ ಅವರು ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವೈದ್ಯರು ಖಚಿತ ಪಡಿಸಿದ್ದರು.ಪತಿ ಸಹಿತ ,ಶಶಾಂಕ್ ಹೆಗ್ಡೆ ಹಾಗೂ ತಂದೆ, ತಾಯಿ,ಓರ್ವ ಸಹೋದರ, ಓರ್ವ ಸಹೋದರಿ ಶಿಕ್ಷಕಿ ಕಾಂಚನಾ ಭಟ್ ಅವರನ್ನು ಅಗಲಿದ್ದಾರೆ.