ಕನ್ನಡ ಉಪನ್ಯಾಸ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಕನ್ನಡ ಪ್ರಾಧಾಯ್ಯಪಕಿ ಶಾಲಿನಿ ಕಾರ್ಯಕ್ರಮವನ್ನು ಉದ್ಘಾಸಿ ಮಾತನಾಡಿ,ಶಿವರಾಮ ಕಾರಂತರ ‘ಸರಸಮ್ಮನ ಸಮಾಧಿ’ ಮತ್ತು ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು,’ಕಾನೂನು ಹೆಗ್ಗಡತಿ’ ಈ ಕಾದಂಬರಿಗಳಲ್ಲಿ ಕವಿ ಚಿತ್ರಿಸಿರುವ ಸ್ತ್ರೀ ಪಾತ್ರದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಗಳನ್ನು ನೀಡಿದರು.ವಿದ್ಯಾಲಕ್ಷ್ಮೀ ಕಾಲೇಜಿನ ಸಂಸ್ಥಾಪಕರಾ ಸುಬ್ರಹ್ಮಣ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾಲೇಜಿನ ಆಡಳಿತಧಿಕಾರಿ ಮಮತಾ,ಪ್ರಿನ್ಸಿಪಾಲ್ ಸೀಮಾ ಭಟ್,ವೈಸ್ ಪ್ರಿನ್ಸಿಪಾಲ್ ಸುಜಾತಾ.ಸಾಂಸ್ಕøತಿಕ ಸಮಿತಿ ಅಧ್ಯಕ್ಷೆ ರಾಝಿಕ,ಕನ್ನಡ ಭಾμÁ ವಿಭಾಗದ ಮುಖ್ಯಸ್ಥ ವಿಕಾಸ್ ಉಪಸ್ಥಿತರಿದ್ದರು. ದ್ವಿತೀಯ ವರ್ಷದ ಪ್ಯಾಷನ್ ಡಿಸೈನ್ ವಿಭಾಗದ ವಿದ್ಯಾರ್ಥಿನಿಯರಾದ ವಿದ್ಯಾ ಮತ್ತು ಸಿಂಚನ ನಿರೂಪಿಸಿದರು,ಪ್ರಥಮ ಬ್ಯಾಚುಲರ್ ಆಫ್ ಅಡ್ಮಿನಿಸ್ಟ್ರೇಷನ್ ವಿಭಾಗದ ವಿದ್ಯಾರ್ಥಿನಿಯರಾದ, ಮೇಘ ಮತ್ತು ಮಹಾಲಕ್ಷ್ಮೀ ನಡೆಸಿಕೊಟ್ಟರು.