ವಿಶ್ವ ಪ್ರಸಿದ್ಧ ತ್ರಾಸಿ-ಮರವಂತೆ ಬೀಚ್‍ನಲ್ಲಿ ಸ್ಕೈ ಡೈನಿಂಗ್ ಉದ್ಘಾಟನೆ

Share

Advertisement
Advertisement

ಕುಂದಾಪುರ:ವಿಶ್ವ ಪ್ರಸಿದ್ಧ ತ್ರಾಸಿ ಮರವಂತೆ ಬೀಚ್‍ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸ್ಕೈ ಡೈನಿಂಗ್ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನಡೆಯಿತು.ಧಾರ್ಮಿಕ ಪೂಜಾ ಕಾರ್ಯಗಳನ್ನು ಮಾಡಲಾಯಿತು.
ಸಮುದ್ರ ಮಟ್ಟದಿಂದ ಸುಮಾರು 90 ರಿಂದ 100 ಮೀಟರ್ ಎತ್ತರದಲ್ಲಿ ಕುಳಿತು ಕಡಲ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ,ರಾಷ್ಟ್ರೀಯ ಹೆದ್ದಾರಿ ನೋಟ,ಸೌಪರ್ಣಿಕಾ ನದಿಯ ಸೌಂದರ್ಯ ನೋಡುತ್ತಾ ನಿಮಿಷ್ಟದ ಖಾದ್ಯವನ್ನು ಸವಿಯಬಹುದು.ಟೀಮ್ ಮಂತ್ರಾಸ್ ಅವರು ಆಯೋಜನೆ ಮಾಡಿರುವ ಸ್ಕೈ ಡೈನಿಂಗ್ ಕರ್ನಾಟಕದ ಎರಡನೇ ತಾಣವಾಗಿದ್ದು ಒಂದು ಬಾರಿ 12 ಜನ ಸ್ಕೈಡೈನಿಂಗ್‍ನಲ್ಲಿ ಕುಳಿತು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸ ಬಹುದಾಗಿದೆ .
ಬೇರೆ ಬೇರೆ ರೀತಿಯ ಸ್ಲಾಟ್ ಕೂಡ ಲಭ್ಯವಿದ್ದು ನಿಮ್ಮ ಬಜೆಟ್ ಗೆ ಅನುಗುಣವಾಗಿ ಸ್ಲಾಟ್ ಆಯ್ಕೆ ಮಾಡಿಕೊಂಡು ಸ್ಕೈಡೈನಿಂಗ್‍ನಲ್ಲಿ ನಿಮ್ಮ ಫ್ಯಾಮಿಲಿಯೊಂದಿಗೆ ಏಂಜಾಯ್ ಮಾಡಬುಹುದು.ಗಗನದಲ್ಲಿ ಊಟ ಮಾಡಿದಂತಹ ಅನುಭವವನ್ನು ಹೊಂದಬಹುದು.ಇಂತಹ ಅನುಭವವನ್ನು ಹೊಂದಲು ತ್ರಾಸಿ-ಮರ ಬೀಚ್‍ನಲ್ಲಿ ಬಿಟ್ಟರೆ ಬೇರೆಲ್ಲೂ ಸಾಧ್ಯವಿಲ್ಲ.
ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಸ್ಕೈ ಡೈನಿಂಗ್ ಉದ್ಘಾಟಿಸಿ ಮಾತನಾಡಿ,ವಿಶ್ವ ಪ್ರಸಿದ್ಧ ತ್ರಾಸಿ-ಮರವಂತೆ ಬೀಚ್‍ಗೆ ದೇಶ ವಿದೇಶಗಳಿಂದ ದಿನಂಪ್ರತಿ ಪ್ರವಾಸಿಗರು ಭೇಟಿ ನೀಡುತ್ತಾರೆ.ಸ್ಕೈ ಡೈನಿಂಗ್ ನಿರ್ಮಾಣದಿಂದಾಗಿ ಪ್ರವಾಸಿಗರು ವಿಭಿನ್ನ ರೀತಿಯಲ್ಲಿ ಪ್ರಕೃತಿ ಸೌಂದರ್ಯವನ್ನು ಆಶ್ವಾಧಿಸಲು ಅವಕಾಶ ಮಾಡಿಕೊಟ್ಟಂತಾಗಿದ್ದು.ಪ್ರವಾಸೋದ್ಯಮ ಚಟುವಟಿಕೆಗೂ ಪೂರಕವಾಗಿದೆ ಎಂದು ಹೇಳಿದರು.ಬೀಚ್ ಪ್ರವಾಸೋದ್ಯಮ ಚಟುವಟಿಕೆ ಬೆಳವಣಿಗೆ ಯಿಂದ ಉದ್ಯೋಗ ಸೃಷ್ಟಿ ಜತೆಗೆ ವ್ಯಾಪಾರವಾಹಿವಾಟು ಕೂಟ ವೃದ್ಧಿಯಾಗಲು ಸಹಕಾರಿ ಆಗುತ್ತದೆ ಎಂದರು.
ಟೀಮ್ ಮಂತ್ರಾಸ್ ಸ್ಕೈಡೈನಿಂಗ್ ಮಾಲೀಕರಾದ ಪ್ರವೇಶ್ ಮಂಜೇಶ್ವರ ಮಾತನಾಡಿ,ಮಲ್ಪೆ ಬಿಟ್ಟರೆ ಸ್ಕೈಡೈನಿಂಗ್ ನಿರ್ಮಾಣವಾಗಿರುವುದು ತ್ರಾಸಿ ಮರವಂತೆ ಬೀಚ್‍ನಲ್ಲಿ ಮಾತ್ರ.ಸಮುದ್ರ ಮಟ್ಟದಿಂದ 90 ರಿಂದ 100 ಮೀಟರ್ ಎತ್ತರದಲ್ಲಿ ಕುಳಿತುಕೊಂಡು ಸಮುದ್ರ ಸೌಂದರ್ಯ ನೊಡುವುದರ ಜತೆಗೆ ರಾಷ್ಟ್ರೀಯ ಹೆದ್ದಾರಿ 66ರ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು.ಅತ್ಯಂತ ಪಾರದರ್ಶಕ ವ್ಯವಸ್ಥೆಯಡಿ ನಿರ್ಮಾಣಗೊಂಡಿರುವ ಸ್ಕೈ ಡೈನಿಂಗ್‍ನಲ್ಲಿ ಫ್ಯಾಮಿಲಿ ಮತ್ತು ಸ್ನೇಹಿತರ ಜತೆಗೂಡಿ ಸಮಯವನ್ನು ಕಳೆಯ ಬಹುದು ಎಂದು ಹೇಳಿದರು.
ತ್ರಾಸಿ ಪಂಚಾಯಿತಿ ಅಧ್ಯಕ್ಷ ಮಿಥುನ್ ದೇವಾಡಿಗ ಮಾತನಾಡಿ,ನಮ್ಮ ಪಂಚಾಯಿತಿ ವ್ಯಾಪ್ತಿ ಪ್ರದೇಶದಲ್ಲಿ ಇಂತಹದೊಂದು ಯೋಜನೆ ನಿರ್ಮಾಣವಾಗಿರುವುದು ಬಹಳಷ್ಟು ಖುಷಿಕೊಟ್ಟಿದೆ.ವಿಭಿನ್ನತೆ ಯಿಂದ ಕೂಡಿದ ಇನ್ನಷ್ಟು ಯೋಜನೆಗಳು ಕಾರ್ಯರೂಪಕ್ಕೆ ಬರಲಿ ಎಂದರು.
ಪ್ರವಾಸೋದ್ಯಮ ಇಲಾಖಾ ಅಧಿಕಾರಿ ಕುಮಾರ್.ಪಿ ಮಾತನಾಡಿ,ಹೆಲಿಕಾಪ್ಟರ್ ಜೆಟ್ ವಿಮಾನದಲ್ಲಿ ಕುಳಿತು ನೋಡ ಬಹುದಾದ ಪ್ರಕೃತಿ ಸೌಂದರ್ಯವನ್ನು ಸ್ಕೈ ಡೈನಿಂಗ್ ಕುಳಿತು ನೋಡಬಹುದಾಗಿದೆ.ಇದೊಂದು ಪ್ರವಾಸೋದ್ಯಮ ಇಲಾಖೆ ಕನಸಾಗಿದ್ದು.ಕಾರ್ಯರೂಪಕ್ಕೆ ಬರುವುದರ ಮೂಲಕ ಉದ್ಘಾಟನೆಗೊಂಡಿದೆ ಎಂದು ಹೇಳಿದರು.
ಟೀಮ್ ಮಂತ್ರಾಸ್‍ನ ರಾಕೇಶ್ ಅಥಾವರ್,ನಾರಾಯಣ ಕುಲಾಲ್,ರವಿರಾಜ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಪಠಕಾರ್,ಸದಾಶಿವ ಗಂಗೊಳ್ಳಿ,ದಿವಾಕರ ಶೆಟ್ಟಿ,ಕೆ.ಪಿ ಶೆಟ್ಟಿ,ಕೃಷ್ಣ ಪ್ರಸಾದ್ ಶೆಟ್ಟಿ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page