ಜನತಾ ಆವಿಷ್ಕಾರ್ – 2ಕೆ24 ಕಾರ್ಯಕ್ರಮ ವಿಜ್ಞಾನ,ವ್ಯವಹಾರ, ಸಾಂಸ್ಕೃತಿಕ ಸಂಗಮ ಮೇಳ ಉದ್ಘಾಟನೆ

Share

Advertisement
Advertisement
ಜನತಾ ಆವಿಷ್ಕಾರ ಕಾರ್ಯಕ್ರಮದಲ್ಲಿ ತುಂಬಿದ ವಿದ್ಯಾರ್ಥಿ ಸಮೂಹ
ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ

ಹೆಮ್ಮಾಡಿ:ಜಗತ್ತು ಇಂದು ವ್ಯಾವಹಾರಿಕವಾಗಿ ಮುನ್ನಡೆಯುತ್ತಿದ್ದು.ವಿದ್ಯಾರ್ಥಿಗಳು ವ್ಯಾಪಾರ ಜ್ಞಾನ ಹೊಂದುವುದು ಅತಿ ಮುಖ್ಯವಾಗಿದೆ.ಆ ನಿಟ್ಟಿನಲ್ಲಿ ಜನತಾ ಆವಿಷ್ಕಾರ ಕಾರ್ಯಕ್ರಮ ವಿಧ್ಯಾರ್ಥಿಗಳಿಗೆ ಬೌದ್ಧಿಕ ಶಕ್ತಿ ವೃದ್ಧಿಸಿಕೊಳ್ಳಲು ಸಹಕಾರಿ ಆಗಿದೆ ಎಂದು ಖ್ಯಾತ ಮುಳುಗು ತಜ್ಞ ಈಶ್ವರ ಮಲ್ಪೆ ಹೇಳಿದರು.
ಕುಂದಾಪುರ ತಾಲೂಕಿನ ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಜನತಾ ಆವಿಷ್ಕಾರ್- 2ಕೆ24 ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ
ವಿಜ್ಞಾನ,ವ್ಯವಹಾರ, ಸಾಂಸ್ಕೃತಿಕ ಸಂಗಮ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ವಿಚಾರಗಳು ಒಳ್ಳೆ ಉದ್ದೇಶ ಮಾನವೀಯ ಗುಣ ಮತ್ತು ಮಾನವೀಯತೆಯ ಮೌಲ್ಯಗಳನ್ನು ಜೀವನದಲ್ಲಿ ಒಗ್ಗೂಡಿಸಿ ಕೊಂಡು ಬದುಕನ್ನು ಕಟ್ಟಿಕೊಳ್ಳುವುದರ ಮೂಲಕ ಸತ್ಪ್ರಜೆಗಳಾಗಿ ಸಮಾಜದಲ್ಲಿ ಬಾಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ಸಮಾಜ ಸೇವಕ ರವಿ ಕಟಪಾಡಿ ಮಾತನಾಡಿ, ಜೀವನದಲ್ಲಿ ಕಷ್ಟ ಪಟ್ಟರೆ ಮಾತ್ರ ಬದುಕು ಒಂದು ಹಂತಕ್ಕೆ ತಲುಪುತ್ತದೆ.ಕೆಟ್ಟ ಯೋಚನೆಗಳಿ ಗಿಂತ,ವಿವೇಕತೆ ಯಿಂದ ಕೂಡಿದ ಮನೋಭಾವ ಬೆಳೆಸಿಕೊಳ್ಳುವುದು ಮುಖ್ಯವಾಗಿದೆ ಎಂದು ಹೇಳಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಬಾಬು ಹೆಗ್ಡೆ ಮಾತನಾಡಿ, ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಉದ್ಯೋಗದ ಪರಿಕಲ್ಪನೆ ಕಟ್ಟಿ ಕೊಟ್ಟಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಗೋವಾ ಉದ್ಯಮಿ ಸತೀಶ್ ಪೂಜಾರಿ ಮಾತನಾಡಿ,ಶಿಕ್ಷಣಕ್ಕೆ ಒತ್ತು ಕೊಟ್ಟಂತ್ತೆ ಸಾಮಾಜಿಕ ವ್ಯಾವಹಾರಿಕ ಜ್ಞಾನ ನೀಡುವುದು ಮುಖ್ಯವಾಗಿದೆ.
ವಿದ್ಯಾರ್ಥಿಗಳಿಗೆ ಸ್ವಾಲಂಬಿ ಬದುಕನ್ನು ಕಟ್ಟಿಕೊಳ್ಳಲು ಉದ್ಯೋಗ ಮೇಳ ಬಹಳಷ್ಟು ಪ್ರಯೋಜನಕಾರಿ ಆಗಿದೆ ಎಂದು ಅಭಿಪ್ರಾಯಪಟ್ಟರು.
ಕಿಯೋನಿಕ್ಸ್ ಕುಂದಾಪುರ ಹರ್ಷವರ್ಧನ್ ಮಾತನಾಡಿ,ವಿಷಯದ ಬಗ್ಗೆ ವಿದ್ಯಾರ್ಥಿಗಳು ತಿಳುವಳಿಕೆ ಮತ್ತು ಜ್ಞಾನ ಹೊಂದುವುದು ಅತಿ ಅವಶ್ಯಕವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಆಡಳಿತ ಮಂಡಳಿ ಅಧ್ಯಕ್ಷ,ಪ್ರಿನ್ಸಿಪಾಲ್ ಗಣೇಶ್ ಮೊಗವೀರ ಮಾತನಾಡಿ, ಸ್ಪರ್ಧಾತ್ಮಕ ಯುಗಕ್ಕೆ ಸರಿ ಹೊಂದುವ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಲಾಗುತ್ತಿದ್ದು.ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಮನ್ನಣೆಯನ್ನು ನೀಡುತ್ತಾ ಬರಲಾಗುತ್ತಿದೆ.ವಹಿವಾಟು ವ್ಯಾಪಾರ ಜ್ಞಾನ ಹಾಗೂ ಬುದ್ಧಿವಂತಿಕೆ ಹೆಚ್ಚಿಸುವಲ್ಲಿ ಕಾರ್ಯಕ್ರಮ ಪೂರಕವಾಗಿದೆ ಎಂದರು.ನಿರಂತರ ಪರಿಶ್ರಮ ದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು.
ವಿಜ್ಞಾನ ಮೇಳವನ್ನು ಚೆನ್ನಯ್ಯ.ಯು ಹಾಗೂ ಜನತಾ ಚಿತ್ರ ಸಿರಿಯನ್ನು ಚಿತ್ರ ಕಲಾ ಶಿಕ್ಷಕ ರಾಜೇಶ್ ತಾಳಿಕೋಟೆ ಉದ್ಘಾಟಿಸಿದರು.ಡ್ರಾಮಾ ಸೀಸನ್ 2 ವಿನ್ನರ್ ಸಮೃದ್ಧಿ ಮೊಗವೀರ ಸಾಂಸ್ಕೃತಿಕ ಮೇಳವನ್ನು ಉದ್ಘಾಟಿಸಿ ಶುಭಹಾರೈಸಿದರು.
ಜೆಸಿ ಸಿಟಿ ಕುಂದಾಪುರ ಅಧ್ಯಕ್ಷ ರಾಘವೇಂದ್ರ ಕುಲಾಲ್, ಗುರೂಜಿ ರಾಜಾರಾಮ ಯಡಮೊಗೆ, ಶೈಕ್ಷಣಿಕ ಸಲಹೆಗಾರರಾದ ಚಿತ್ರಾ ಕಾರಂತ,ಜನತಾ ಹೈಸ್ಕೂಲ್ ಹೆಮ್ಮಾಡಿ ಮುಖ್ಯೋಪಾಧ್ಯಾಯರಾದ ಮಂಜು ಕಾಳವಾರ, ಕಾಲೇಜಿನ ವೈಸ್ ಪ್ರಿನ್ಸಿಪಾಲ್ ರಮೇಶ್ ಪೂಜಾರಿ, ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು,ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.
ಪ್ರಿನ್ಸಿಪಾಲ್ ಗಣೇಶ್ ಮೊಗವೀರ ಸ್ವಾಗತಿಸಿದರು.ಉಪನ್ಯಾಸಕ ಉದಯ್ ನಾಯ್ಕ್ ನಿರೂಪಿಸಿದರು.ಉಪನ್ಯಾಸಕ ಹರ್ಷ ವಂದಿಸಿದರು.
ಜನತಾ ಆವಿಷ್ಕಾರ ಕಾರ್ಯಕ್ರಮದಲ್ಲಿ 40ಕ್ಕೂ ಅಧಿಕ ಸ್ಟಾಲ್ ಗಳಲ್ಲಿ ವಿದ್ಯಾರ್ಥಿಗಳು ನಾನಾ ಬಗೆಯ ಮಳಿಗೆಗಳನ್ನು ತೆರೆದು ವಹಿವಾಟು ನಡೆಸಿದರು.ವಿಜ್ಜಾನ ಮೇಳ ನೋಡುಗರ ಮನ ಸೆಳೆಯಿತು.
ಕುಂದಾಪುರ ಮತ್ತು ಬೈಂದೂರು ವಲಯದ ಸುಮಾರು 25ಕ್ಕೂ ಅಧಿಕ ಶಾಲೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು.ಸಾವಿರಾರು ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು
.

Advertisement

ವರದಿ: ಜಗದೀಶ

Advertisement
Advertisement


Share

Leave a comment

Your email address will not be published. Required fields are marked *

You cannot copy content of this page