ಏಪ್ರಿಲ್ 21 ರಂದು ಹಸಿರು ಹೊರೆ ಕಾಣಿಕೆ ಸಮರ್ಪಣೆ
ಕುಂದಾಪುರ:ತಾಲೂಕಿನ ಅಂಪಾರು ಗ್ರಾಮದ ಶಾನ್ಕಟ್ಟು ಕೆಳಗಿನ ಮನೆ ಕುಟುಂಬಸ್ಥರ ಆದಿ ನಾಗ ಬನದಲ್ಲಿ ಏಪ್ರಿಲ್ 23 ರ ಮಂಗಳವಾರ ದಂದು ನಡೆಯಲಿರುವ ಏಕ ಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ ಏಪ್ರಿಲ್ 21 ರ ಭಾನುವಾರದಂದು ಹಸಿರು ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕೆಂದು ನಾಗಮಂಡಲೋತ್ಸವ ಸಮಿತಿ ಅವರು ವಿನಂತಿಸಿಕೊಂಡಿದ್ದಾರೆ.
ಏಕ ಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮದ ಪೂರ್ವ ತಯಾರಿ ಅದ್ದೂರಿಯಾಗಿ ನಡೆಯುತ್ತಿದ್ದು,ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ತಳಿರು ತೋರಣಗಳಿಂದ,ಸುಣ್ಣ ಬಣ್ಣ ಲೇಪನ ದೊಂದಿಗೆ ಮಂಟಪವನ್ನು ಸಿಂಗರಿಸಲಾಗಿದೆ.ತುಂಬು ಉತ್ಸಾಹದಿಂದ ಗ್ರಾಮಸ್ಥರು ಕೆಲಸ ಕಾರ್ಯಗಳಲ್ಲಿ ತೊಡಗಿ ಕೊಂಡಿದ್ದಾರೆ.
ಏಪ್ರಿಲ್ 23 ನಡೆಯಲಿರುವ ನಾಗಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ ಅಂಗವಾಗಿ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.
ಹೊರೆ ಕಾಣಿಕೆ ಸಲ್ಲಿಸ ಬಯಸುವವರು ಎಪ್ರಿಲ್ 21 ರಿಂದ ಏಪ್ರಿಲ್ 22 ರ ವರೆಗೆ ಶ್ರೀ ನಾಗದೇವರ ಸನ್ನಿಧಿಯಲ್ಲಿ ನೀಡಬಹುದು ಎಂದು ಆಯೋಜಕರು ತಿಳಿಸಿದ್ದಾರೆ.