ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ಸಮುದ್ರದಲ್ಲಿ ನಾಪತ್ತೆ
ಬೈಂದೂರು:ಕೈರಂಪಣಿ ಮೀನುಗಾರಿಕೆಗೆ ಮಾಡಲು ಸಮುದ್ರಕ್ಕೆ ತೆರಳಿದ್ದ ನಾಲ್ವರು ಮೀನುಗಾರರಲ್ಲಿ ಇಬ್ಬರು ಮೀನುಗಾರರು ಸಮುದ್ರ ಪಾಲಾದ ಘಟನೆ ಭಾನುವಾರ ಸಂಜೆ ಅಳ್ವೆಗದ್ದೆಯಲ್ಲಿ ನಡೆದಿದೆ.ಶಿರೂರು ಗ್ರಾಮದ ಕೆಸರಕೋಡಿ ನಿವಾಸಿಗಳಾದ ಗಂಗೊಳ್ಳಿ ಮುಸಾಭ್(22) ಹಾಗೂ ನಝಾನ್(24) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.ಕಳೆದ ಹಲವು ಸಮಯದಿಂದ ಕೈರಂಪಣಿ ಮೀನುಗಾರಿಕೆ ನಡೆಸುತ್ತಿರುವ ಇವರು ಭಾನುವಾರ ಸಂಜೆ ಕೂಡ ಕೈರಂಪಣಿ ಮೀನುಗಾರಿಕೆಂದು ಸಮುದ್ರಕ್ಕೆ ತೆರಳಿದ್ದರು.ಸಮುದ್ರ ಪ್ರಕ್ಷುಬ್ದಗೊಂಡಿದ್ದ ಕಾರಣ ಅಪ್ಪಳಿಸಿದ ಬಾರಿ ಅಲೆಯ ಹೊಡೆತಕ್ಕೆ ಇಬ್ಬರು ಮೀನುಗಾರರು ಆಯತಪ್ಪಿ ಕಡಲಿಗೆ ಬಿದ್ದು ನಾಪತ್ತೆ ಆಗಿದ್ದಾರೆ.ನಾಪತ್ತೆಯಾದ ಇಬ್ಬರು ಮೀನುಗಾರರಿಗಾಗಿ ಸ್ಥಳೀಯ ಮೀನುಗಾರರು ಹುಡುಕಾಟ ನಡೆಸಿದ್ದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ.
ಸಮುದ್ರದಲ್ಲಿ ನಾಪತ್ತೆ ಆದ ಮೀನುಗಾರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.ಘಟನಾ ಸ್ಥಳಕ್ಕೆ ಬೈಂದೂರು ಠಾಣಾಧಿಕಾರಿ ನಿರಂಜನ ಗೌಡ,ಅಗ್ನಿಶಾಮಕ ದಳ,ಕರಾವಳಿ ಕಾವಲು ಪಡೆ,ತಹಶೀಲ್ದಾರರು ಹಾಗೂ ಸ್ಥಳೀಯ ಮೀನುಗಾರರು ಹಾಜರಿದ್ದರು.