ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣವಂತ ರಾಗಬೇಕಾದರೆ ಸರ್ಕಾರಿ ಶಾಲೆಗಳು ಉಳಿಯಬೇಕು: ಶಾಸಕ ಗುರುರಾಜ ಗಂಟಿಹೊಳೆ

Share

Advertisement
Advertisement

ಕುಂದಾಪುರ:ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯಾವಂತರಾಗಬೇಕಾದರೆ
ಸರ್ಕಾರಿ ಶಾಲೆಗಳು ಉಳಿಯಬೇಕು.ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ, ಸೂಕ್ತ ಸೌಲಭ್ಯ ಕಲ್ಪಿಸುವ ದೊಡ್ಡ ಕಾರ್ಯ ಆಗಬೇಕಿದೆ. ಹೀಗಾಗಿಯೇ 300 ಟ್ರೀಸ್ಸ್ ಕಲ್ಪನೆಯನ್ನು ಸಮೃದ್ಧ ಬೈಂದೂರು ಮೂಲಕ ಕಾರ್ಯರೂಪಕ್ಕೆ ತರಲಾಗಿದೆ. ಇದಕ್ಕೆ ದಾನಿಗಳು ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಯ್ದ ಸರ್ಕಾರಿ ಶಾಲೆಗಳಲ್ಲಿ ಸ್ಫೂರ್ತಿ ಕೌಶಲ್ಯ ಕೇಂದ್ರ ತೆರೆಯಲು ಸ್ವಯಂ ಸ್ಫೂರ್ತಿ ಫೌಂಡೇಶನ್ ಅಧ್ಯಕ್ಷ ನಾಗರಾಜ ಶೆಟ್ಟಿ ಜಡ್ಕಲ್ ಅವರು ಪ್ರೇರಕವಾಗಿ ನಿಂತಿದ್ದಾರೆ ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಹೇಳಿದರು.
ಉಳ್ಳೂರು 11 ಹಾಗೂ ನಾಯ್ಕನಕಟ್ಟೆ ಸರ್ಕಾರಿ ಶಾಲೆಯ ಶ್ರೇಯಾಭಿವೃದ್ಧಿಗಾಗಿ ರೂಪಿಸಿರುವ ಸಮೃದ್ಧ ಬೈಂದೂರು ಪರಿಕಲ್ಪನೆಯ 300 ಟ್ರೀಸ್ ಯೋಜನೆಯಡಿ ಬೆಂಗಳೂರಿನ ಸ್ವಯಂಸ್ಫೂರ್ತಿ ಫೌಂಡೇಶನ್ ವತಿಯಿಂದ ಸ್ವಯಂಸ್ಫೂರ್ತಿ ಕೌಶಲ್ಯ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಯಲ್ಲಿ ಓದಿದ ಅನೇಕರು ಇಂದು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಅದಕ್ಕೆ ಸರ್ಕಾರಿ ಶಾಲೆಯೇ ಕಾರಣವೂ ಆಗಿದೆ.ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ. ಹಲವು ಶಾಲೆಗಳಿಗೆ ಕಟ್ಟಡದ ಅಗತ್ಯವಿದ್ದರೆ, ಇನ್ನು ಕೆಲವು ಶಾಲೆಗಳಿಗೆ ಕಂಪ್ಯೂಟರ್ ಮೊದಲಾದ ಮೂಲಸೌಕರ್ಯಗಳ ತುರ್ತು ಅವಶ್ಯಕತೆ ಇದೆ. ಹೀಗಾಗಿ ದಾನಿಗಳ ಮೂಲಕ ಸರ್ಕಾರಿ ಶಾಲೆಗೆ ಬೇಕಿರುವ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸುವ ಯೋಜನೆ ಜಾರಿಯಲ್ಲಿದೆ ಎಂದರು.
ಎಲ್ಲಾ ಸರ್ಕಾರಿ ಶಾಲೆಗಳು ಉಳಿಯಬೇಕು. ಇದಕ್ಕೆ ಸ್ಥಳೀಯರ ಪ್ರೋತ್ಸಾಹದ ಜೊತೆಗೆ ಶಾಲಾ ಶಿಕ್ಷಕರು ಹಳೆ ವಿದ್ಯಾರ್ಥಿಗಳ ಉತ್ಸಾಹವು ಅಗತ್ಯವಾಗಿದೆ.ಕೆಲವು ಶಾಲೆಗಳಲ್ಲಿ ಶಿಕ್ಷಕರು ಉತ್ಸಾಹ ತೋರಿದರೆ ಇನ್ನು ಕೆಲವು ಶಾಲೆಯಲ್ಲಿ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾಗರಾಜ ಶೆಟ್ಟಿ ಅವರ ತಂಡವೇ ಕಂಪ್ಯೂಟರ್ ಪೂರೈಸುವ ಜತೆಗೆ ಅದಕ್ಕೆ ಅಗತ್ಯವಿರುವ ಟೇಬಲ್ ಇತ್ಯಾದಿಗಳನ್ನು ಸಿದ್ಧಪಡಿಸಿ ನೀಡುತ್ತಿದ್ದಾರೆ.ಸ್ವಯಂಸ್ಫೂರ್ತಿ ಕೌಶಲ್ಯ ಕೇಂದ್ರವು ಪ್ರಾಥಮಿಕ, ಪ್ರೌಢ ಹಂತದಲ್ಲೇ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ, ಕಂಪ್ಯೂಟರ್ ಜ್ಞಾನ ಹೆಚ್ಚಳಕ್ಕೆ ಅನುಕೂಲವಾಗಲಿದೆ. ಈ ಮೂಲಕ ಸರ್ಕಾರಿ ಶಾಲೆಗೆ ಇನ್ನಷ್ಟು ಶಕ್ತಿ ಬರಲಿದೆ ಎಂದು ಹೇಳಿದರು.
ಸ್ವಯಂಸ್ಫೂರ್ತಿ ಫೌಂಡೇಶನ್ ಸಂಸ್ಥಾಪಕರಾದ ನಾಗರಾಜ ಶೆಟ್ಟಿ ಜಡ್ಕಲ್,ಉಳ್ಳೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ಪೂಜಾರಿ, ಎಸ್ಡಿಎಂಸಿ ಮಾಜಿ ಸದಸ್ಯ ಕಿಶೋರ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ನಾಯ್ಕನಕಟ್ಟೆ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆರ್ಗಾಲ್ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇವತಿ, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗಣ್ಯರು, ಹಿರಿಯರು ಉಪಸ್ಥಿತರಿದ್ದರು.

Advertisement

ವಿವಿಧೆಡೆ ಸ್ವಯಂ ಸ್ಫೂರ್ತಿ ಕೌಶಲ್ಯ ಕೇಂದ್ರ ಉದ್ಘಾಟನೆ

ಸರ್ಕಠರಿ ಹಿರಿಯ ಪ್ರಾಥಮಿಕ ಶಾಲೆ ಕಪ್ಪಾಡಿ ಮೂರೂರು ಸ್ವಯಂಸ್ಪೂರ್ತಿ ಕೌಶಲ್ಯ ಕೇಂದ್ರವನ್ನು ಶಾಸಕರ ಪ್ರತಿನಿಧಿಯಾಗಿ ಉದ್ಯಮಿ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಕಾಲ್ತೋಡು ಪಂಚಾಯತ್ ಅಧ್ಯಕ್ಷರು ಅಣ್ಣಪ್ಪ ಶೆಟ್ಟಿ, ಪ್ರಮುಖರಾದ ಆದಿರಾಜ್ ಜೈನ್, ಗೋಪಾಲ್ ಶೆಟ್ಟಿ ಮೂರೂರು ದೊಡ್ಮನೆ ,ಚಂದ್ರ ಶೇಖರ್ ಶೆಟ್ಟಿ ಹೊರ್ಲೆಮನೆ,
ಅಣ್ಣಪ್ಪ ಪೂಜಾರಿ ಕಮ್ತಾಡಿಮನೆ, CRP ರಾಮನಾಥ್ ಮೇಸ್ತ, ಪ್ರದೀಪ್ ಶೆಟ್ಟಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಹೆರಿಯಣ್ಣ ಮಡಿವಾಳ, ಶಾಲಾ ಮುಖ್ಯೋಪಾಧ್ಯಾಯಿನಿ ಶೈಲಜಾ, ಸಮೃದ್ಧ ಬೈಂದೂರು ತಂಡದ ಸದಸ್ಯರಾದ ಶೋಧನ್ ಮಲ್ಪೆ ಉಪಸ್ಥಿತರಿದ್ದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರೇಶಿರೂರು ನಲ್ಲಿ ಸ್ವಯಂಸ್ಫೂರ್ತಿ ಕೌಶಲ್ಯ ಕೇಂದ್ರದ ಉದ್ಘಾಟನೆಯನ್ನು ಸ್ವಯಂಸ್ಪೂರ್ತಿ ಫೌಂಡೇಶನ್ ಸಂಸ್ಥಾಪಕರಾದ ನಾಗರಾಜ್ ಶೆಟ್ಟಿ ಜಡ್ಕಲ್ ನೆರವೇರಿಸಿದರು.
ಶಾಸಕರ ಪ್ರತಿನಿಧಿ ಆಗಿ ಉದ್ಯಮಿ ಸುರೇಶ್ ಶೆಟ್ಟಿ, ಪ್ರಮುಖರಾದ ಸತೀಶ್ ಶೆಟ್ಟಿ ,ನಾರಾಯಣ ಶೆಟ್ಟಿ, ರಾಘವೇಂದ್ರ ಗಾಣಿಗ, ವಸಂತ್ ಹೆಗ್ಡೆ, ರತ್ನಾಕರ್ ಶೆಟ್ಟಿ, ಎಂ.ಆರ್. ಶೆಟ್ಟಿ, ಸಮೃದ್ಧ ಬೈಂದೂರು ತಂಡದ ಸದಸ್ಯರಾದ ಶೋಧನ್ ಮಲ್ಪೆ ಉಪಸ್ಥಿತರಿದ್ದರು

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಡ್ಕಲ್ ನಲ್ಲಿ ಸ್ವಯಂಸ್ಪೂರ್ತಿ ಕೌಶಲ್ಯ ಕೇಂದ್ರವನ್ನು ಸ್ವಯಂ ಸ್ಪೂರ್ತಿ ಫೌಂಡೇಶನ್ ಸಂಸ್ಥಾಪಕರಾದ ನಾಗರಾಜ್ ಶೆಟ್ಟಿ ಜಡ್ಕಲ್ ಉದ್ಘಾಟಿಸಿದರು. ಪ್ರಮುಖರಾದ ಲಕ್ಷ್ಮೀ, ಭಾರತಿ ಶೆಟ್ಟಿ, ಸಮೃದ್ಧ ಬೈಂದೂರು ತಂಡದ ಸದಸ್ಯರಾದ ಶೋಧನ್ ಮಲ್ಪೆ ಉಪಸ್ಥಿತರಿ

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಯ್ಯಂಗಾರ್ ನಲ್ಲಿ ಸ್ವಯಂಸ್ಪೂರ್ತಿ ಕೌಶಲ್ಯ ಕೇಂದ್ರದ ಉದ್ಘಾಟನೆಯನ್ನು ಸ್ವಯಂ ಸ್ಪೂರ್ತಿ ಫೌಂಡೇಶನ್ ಸಂಸ್ಥಾಪಕರಾದ ನಾಗರಾಜ್ ಶೆಟ್ಟಿ ಜಡ್ಕಲ್ ನೆರವೇರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗೇಶ್, ಕೆರಾಡಿ ಪಂಚಾಯತ್ ಅಧ್ಯಕ್ಷರಾದ ಸುದರ್ಶನ ಶೆಟ್ಟಿ, ಸದಸ್ಯರಾದ ರಾಘು ಕೊಠಾರಿ ಕೆರಾಡಿ, ಸಮೃದ್ಧ ಬೈಂದೂರು ತಂಡದ ಸದಸ್ಯರಾದ ಶೋಧನ್ ಮಲ್ಪೆ ಉಪಸ್ಥಿತರಿದ್

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದುಡ್ಡಿನಗುಳಿ ಮುದೂರು ನಲ್ಲಿ ಸ್ವಯಂಸ್ಪೂರ್ತಿ ಕೌಶಲ್ಯ ಕೇಂದ್ರದ ಉದ್ಘಾಟನೆಯನ್ನು ಸ್ವಯಂ ಸ್ಪೂರ್ತಿ ಫೌಂಡೇಶನ್ ಸಂಸ್ಥಾಪಕರಾದ ನಾಗರಾಜ್ ಶೆಟ್ಟಿ ಜಡ್ಕಲ್ ನೆರವೇರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗೇಶ್, ಮುದುರು ಪಂಚಾಯತ್ ನ ಸದಸ್ಯರಾದ ಲಕ್ಷ್ಮಣ್ ಶೆಟ್ಟಿ ಸುಲ್ಯ ಭೋವಿ, ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾದ ಸಂತೋಷ್ ನಾಯಕ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರಕಾಶ್ ನಾಯಕ್, ಶಾಲಾ ಹಳೆ ವಿದ್ಯಾರ್ಥಿಯಾದ ಸಂದೀಪ್ ಮುದುರು ಉಪಸ್ಥಿತರಿ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೂಡಿಗೆ ಕೊಡ್ಲಾಡಿ ಯಲ್ಲಿ ಸ್ವಯಂಸ್ಪೂರ್ತಿ ಕೌಶಲ್ಯ ಕೇಂದ್ರದ ಉದ್ಘಾಟನೆ ನೇರವೇರಿಸಲಾಯಿತು. ಈ ಸಮಾರಂಭದಲ್ಲಿ ಸ್ವಯಂ ಸ್ಪೂರ್ತಿ ಫೌಂಡೇಶನ್ ಸಂಸ್ಥಾಪಕರಾದ ನಾಗರಾಜ್ ಶೆಟ್ಟಿ ಜಡ್ಕಲ್, ಆಜ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಶೆಟ್ಟಿ ಕೊಡ್ಲಾಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ಅಡಿಗ, ಸಮೃದ್ಧ ಬೈಂದೂರು ತಂಡದ ಸದಸ್ಯರಾದ ಶೋಧನ್ ಮಲ್ಪೆ ಉಪಸ್ಥಿತರಿದ್ದರು.

Advertisement
Advertisement


Share

Leave a comment

Your email address will not be published. Required fields are marked *

You cannot copy content of this page