ಪ್ರವಾಸಿಗರಿಗೆ ಗಂಗೊಳ್ಳಿ ಠಾಣಾಧಿಕಾರಿ ಪಾಠ
ಕುಂದಾಪುರ:ಮಳೆಗಾಲದಲ್ಲಿ ಕಡಲು ಪ್ರಕ್ಷುಬ್ಧಗೊಳ್ಳುವುದರಿಂದ ಕಡಲಿಗೆ ಇಳಿಯದಂತೆ ನಿಷೇಧ ಹೇರಲಾಗಿದ್ದರು ತ್ರಾಸಿ-ಮರವಂತೆ ಬೀಚ್ಗೆ ಆಗಮಿಸುತ್ತಿರುವ ಪ್ರವಾಸಿಗರು ನಿಷೇಧದ ನಡುವೆಯೂ ಕಡಲಿಗೆ ಇಳಿದು ಮೋಜು ಮಸ್ತಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.ಪ್ರವಾಸಿಗರ ಹಿತದೃಷ್ಟಿಯಿಂದ ಗಂಗೊಳ್ಳಿ ಠಾಣೆಯ ಠಾಣಾಧಿಕಾರಿ ಹರೀಶ್.ಆರ್ ನಾಯ್ಕ್ ಅವರು ಕಡಲ ಪ್ರಕ್ಷುಬ್ಧತೆ ಕುರಿತು ಪ್ರವಾಸಿಗರಿಗೆ ತಿಳಿ ಹೇಳುತ್ತಿರುವ ಪಾಠ ಜನ ಮೆಚ್ಚುಗೆಗೆ ಪಾತ್ರವಾಗಿದೆ.
ದೈತ್ಯಾಕಾರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿರುವ ದೃಶ್ಯವನ್ನು ತಮ್ಮ ಸೆಲ್ಫಿ ಜತೆಗೆ ಸೇರೆ ಹಿಡಿಯಲು ಕೆಂಪು ಪಟ್ಟಿಯನ್ನು ದಾಟಿ ಬ್ರೆಕ್ ವಾಟರ್ ಮೇಲೆ ಪ್ರವಾಸಿಗರು ತೆರಳುತ್ತಿದ್ದಾರೆ.ಕಲ್ಲಿನ ಮೇಲೆ ಪಾಚಿ ಬೆಳೆದಿದ್ದರಿಂದ ಕಲ್ಲು ಜಾರುವ ಸಂಭವ ಅಧಿಕವಾಗಿದ್ದು ಪ್ರವಾಸಿಗರು ಬ್ರೆಕ್ ವಾಟರ್ ಮೇಲೆ ತೆರಳುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಇದೆ.ಮಕ್ಕಳೊಂದಿಗೆ ಕಡಲ ತೀರಕ್ಕೆ ಇಳಿದು ನೀರಿನೊಂದಿಗೆ ಆಟವಾಡುತ್ತಾ ಮೋಜು ಮಸ್ತಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.ಕಡಲಿಗೆ ಇಳಿಯದಂತೆ ಸೂಚನಾ ಫಲಕಗಳನ್ನು ಅಳವಡಿಕೆ ಮಾಡಿದ್ದರು ಪ್ರವಾಸಿಗರು ಗಾಡ್ರ್ಸ್ಗಳ ಮಾತು ಕೇಳುತ್ತಿಲ್ಲ.