ತ್ರಾಸಿ ಇಗರ್ಜಿಯಲ್ಲಿ ವನಮಹೋತ್ಸವ ಕಾರ್ಯಕ್ರಮ ಆಚರಣೆ
ಕುಂದಾಪುರ:ತ್ರಾಸಿ ಚರ್ಚ್ ಕಥೊಲಿಕ್ ಸಭಾ,ಸ್ಪೂರ್ತಿ ಸ್ತ್ರೀ ಸಂಘಟನೆ,ವೈ.ಸಿ.ಎಸ್ ಹಾಗೂ ಪರಿಸರ ಆಯೋಗದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮವನ್ನು ತ್ರಾಸಿ ಇಗರ್ಜಿಯಲ್ಲಿ ಆಚರಿಸಲಾಯಿತು.
ತ್ರಾಸಿ ಚರ್ಚಿನ ಧರ್ಮಗುರು ವಂದನೀಯ ಫಾದರ್ ರೊಸಾರಿಯೊ ಫೆರ್ನಾಂಡಿಸ್ ಅವರು ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷ ಮಾರ್ಕ್ಡಿ ಅಲ್ಮೇಡಾ,20 ಆಯೋಗಗಳ ಸಂಯೋಜಕಿ ಮೋಲಿ ಡಿಸೋಜಾ,ಕಥೊಲಿಕ್ ಸಭಾದ ಅಧ್ಯಕ್ಷ ಜಾನ್ ರೊನಾಲ್ಡ್ ಅಲ್ಮೇಡಾ,ಸ್ತ್ರೀ ಸಂಘಟನೆ ಅಧ್ಯಕ್ಷೆ ವೀಣಾ ಮೊಂತೇರೊ,ಪರಿಸರ ಆಯೋಗದ ಸಂಚಾಲಕಿ ಡೊರತಿ ಲುವಿಸ್,ವೈ.ಸಿ.ಎಸ್ ಸಂಚಾಲಕಿ ವಿನೀತ ಡಿಸೋಜ ಉಪಸ್ಥಿತರಿದ್ದರು.































































































































































































































































































































































































































































































































































































































































































































































































































































































































































































































































































































































































































































































































































































































































































