ಟೀ ಡೇ ಕೆಫೆ ಪ್ರಾರಂಭೋತ್ಸವ
ಕುಂದಾಪುರ:ಬೆಂಗಳೂರು ಹೊಂಗಸಂದ್ರ ಬೊಮ್ಮನಹಳ್ಳಿಯಲ್ಲಿ ಸೊಹನ್ ಶೆಟ್ಟಿ ಮೊಳಹಳ್ಳಿ ಮತ್ತು ಡಾ.ಬಿಪಿನ್ ಶೆಟ್ಟಿ ಮೊಳಹಳ್ಳಿ ಅವರ ಪಾಲುದಾರಿಕೆಯಲ್ಲಿ ನೂತನವಾಗಿ ಆರಂಭಗೊಂಡ ಟೀ ಡೇ ಕೆಫೆ ಪ್ರಾರಂಭೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಬೊಮ್ಮನಹಳ್ಳಿ ಶಾಸಕರಾದ ಸತೀಶ್ ರೆಡ್ಡಿ ಅವರು ಟೀ ಡೇ ಕೆಫೆಯನ್ನು ಉದ್ಘಾಟಿಸಿ ಮಾತನಾಡಿ ನವ ಉದ್ಯಮ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭಹಾರೈಸಿದರು.ಈ ಸಂದರ್ಭದಲ್ಲಿ ಟೀ ಡೇ ಕೆಫೆ ಪಾಲುದಾರರಾದ ಸೋಹನ ಶೆಟ್ಟಿ ಮೊಳಹಳ್ಳಿ,ಡಾ.ಬಿಪಿನ್ ಶೆಟ್ಟಿ ಮೊಳಹಳ್ಳಿ ಮತ್ತು ಅರ್ಚಕರು,ಅವರ ಹಿತೈಷಿಗಳು ಉಪಸ್ಥಿತರಿದ್ದರು.






















































































































































































































































































































































































































































































































































































































































































































































































































































































































































































































































































































































































































































































































































































































































































