ಶ್ರೀಸ್ವಾಮಿ ಬ್ರಹ್ಮಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಉದ್ಘಾಟನೆ
ಕುಂದಾಪುರ:ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್ತ್ ಬೈಂದೂರು ತಾಲೂಕು,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು,ಪಡುಕೋಣೆ ವಲಯ ಅವರ ಸಹಯೋಗದೊಂದಿಗೆ ಶ್ರೀಸ್ವಾಮಿ ಬ್ರಹ್ಮಲಿಂಗೇಶ್ವರ ನೂತನ ಮಹಿಳಾ ಭಜನಾ ಮಂಡಳಿ ಮಂಕಿ ಗುಜ್ಜಾಡಿ ಅದರ ಉದ್ಘಾಟನಾ ಕಾರ್ಯಕ್ರಮ ಭಾನುವಾರ ಮಂಕಿಯಲ್ಲಿ ನಡೆಯಿತು.
ಹಿರಿಯ ಭಜನಾ ಭಜಕರಾದ ಕೃಷ್ಣ ನಾಯ್ಕ ಉದ್ಘಾಟಿಸಿದರು.ಭಜನಾ ಪರಿಷತ್ತ್ ಅಧ್ಯಕ್ಷ ಕೃಷ್ಣ ಪೂಜಾರಿ ಶಿರೂರು ಅಧ್ಯಕ್ಷತೆ ವಹಿಸಿದ್ದರು.ಯೋಜನಾಧಿಕಾರಿ ವಿನಾಯಕ ಪೈ,ತಾಲೂಕು ವಲಯ ಸಂಯೋಜಕರಾದ ಮಂಜುನಾಥ್ ಊಳ್ಳೂರು,ಮಂಜು ಪೂಜಾರಿ ಗೋಳಿಹೊಳೆ,ಬಾಬು ದೇವಾಡಿಗ ಉಪ್ಪÅಂದ,ಪೂರ್ಣಿಮಾ ಕೊಲ್ಲೂರು ಉಪಸ್ಥಿತರಿದ್ದರು.ಮಂಜುನಾಥ ಹೊಸಾಡು ಸ್ವಾಗತಿಸಿದರು.ಸಹನಾ ಪ್ರಾರ್ಥಿಸಿದರು.ಕೃಷ್ಣ ಪೂಜಾರಿ ಗಂಗೊಳ್ಳಿ ನಿರೂಪಿಸಿ,ವಂದಿಸಿದರು.ಶ್ರೀಸ್ವಾಮಿ ಬ್ರಹ್ಮಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ನೂತನ ಅಧಕ್ಷರಾಗಿ ಸರಸ್ವತಿ ಆಯ್ಕೆಯಾಗಿದ್ದಾರೆ.