ಬಿಜಾಡಿ ಸಮುದ್ರ ತೀರದಲ್ಲಿ ಕೊಚ್ಚಿ ಹೋಗಿದ್ದ ಯೋಗೀಶ್ ಮೃತ ದೇಹ ಕಾರವಾರದಲ್ಲಿ ಪತ್ತೆ

ಕುಂದಾಪುರ:ತುಮಕೂರು ಜಿಲ್ಲೆಯ ತಿಪಟೂರು ನಿವಾಸಿ ಯೋಗೀಶ್ ( 22) ಎಂಬಾತ ಯುವಕ ಜೂ.19 ರಂದು ಕುಂದಾಪುರ ತಾಲೂಕಿನ ಬಿಜಾಡಿ ಸಮುದ್ರ ತೀರದಲ್ಲಿ ತನ್ನ ಸ್ನೇಹಿತನೊಂದಿಗೆ ವಿಹಾರ ನಡೆಸುತ್ತಿದ್ದ ಸಮಯದಲ್ಲಿ ಕಡಲ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿ ಸಮುದ್ರದಲ್ಲಿ ನಾಪತ್ತೆಯಾಗಿದ್ದರು.
ಯೋಗೀಶ್ ಮೃತ ದೇಹ ಜೂನ್.25 ರ ಮಂಗಳವಾರ ಕಾರವಾರ ಕಡಲ ತೀರದಲ್ಲಿ ಪತ್ತೆಯಾಗಿದೆ.ಮಳೆ ಮತ್ತು ಗಾಳಿ ಅಬ್ಬರದಿಂದ ಬಿಜಾಡಿ ಸಮುದ್ರ ಕಿನಾರೆಯಿಂದ ಯೋಗೀಶ್ ಮೃತ ಶರೀರ ಕಾರವಾರದತ್ತ ತೇಲಿಕೊಂಡು ಹೋಗಿದೆ ಎಂದು ಮುಳುಗು ತಜ್ಞ ದಿನೇಶ್ ಖಾರ್ವಿ ಮತ್ತು ಅವರ ತಂಡ ಅಭಿಪ್ರಾಯಪಟ್ಟಿದೆ.
ಸಮುದ್ರದಲ್ಲಿ ನಾಪತ್ತೆಯಾಗಿರುವ ಯೋಗೀಶ್ ಗಾಗಿ ವಿಶೇಷ ಕಾರ್ಯಾಚರಣೆ ಮೂಲಕ ಸಮುದ್ರದಲ್ಲಿ ಹುಡುಕಾಟ ಮಾಡಿದ್ದರು.ಹವಾಮಾನ ವೈಪರೀತ್ಯದಿಂದ ಕಾರ್ಯಾಚರಣೆ ಅಡ್ಡಿಯಾಗಿತ್ತು.ಒಂದು ವಾರದ ಬಳಿಕ ಯೋಗೀಶ್ ಮೃತ ಶರೀರ ಉಬ್ಬಿದ ಸ್ಥಿತಿಯಲ್ಲಿ ಕಾರವಾರದಲ್ಲಿ ಪತ್ತೆಯಾಗಿದೆ.
ಯೋಗೀಶ್ ಮೃತ ಶರೀರ ಹುಡುಕಾಟ ಕಾರ್ಯಾಚರಣೆಯಲ್ಲಿ ಗಂಗೊಳ್ಳಿ ಮತ್ತು ಕುಂದಾಪುರ ಪೊಲೀಸ್ ಠಾಣೆ ಠಾಣಾಧಿಕಾರಿ ಗಳು ಮತ್ತು ಸಿಬ್ಬಂದಿಗಳು,ಜೀವ ರಕ್ಷಕ ದಿನೇಶ್ ಖಾರ್ವಿ ಮತ್ತು ತಂಡದ ಸದಸ್ಯರು,ಬಿಜಾಡಿ ಫ್ರೆಂಡ್ಸ್ ಹಾಗೂ ಟೈಲರ್ ಅಸೋಸಿಯೇಶನ್ ಉಡುಪಿ ಭಾಗವಹಿಸಿದ್ದರು.