ನಾವುಂದ:ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ

Share

Advertisement
Advertisement

ಕುಂದಾಪುರ:ನಾವುಂದ ಮಸ್ಕಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಮಂಗಳವಾರ ನಡೆಯಿತು.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಹೂವಿನ ಅಲಂಕಾರ ಪೂಜೆ,ಹಣ್ಣು ಕಾಯಿ ಮತ್ತು ಮಂಗಳಾರತಿ ಸೇವೆ,ಮಹಾ ಪೂಜೆ,ಅನ್ನ ಸಂತರ್ಪಣೆ ಸೇವೆಯನ್ನು ನೆರವೇರಿಸಲಾಯಿತು.ಭಜನೆ,ಕೃಷ್ಣ ಜನನ ಕಾರ್ಯಕ್ರಮ ಜರುಗಿತು.

ಬಾಲ ಕೃಷ್ಣ ವೇಷ ಸ್ಪರ್ಧೆ,ಹಗ್ಗಜಗ್ಗಾಟ,ಸಂಗೀತ ಮೊಸರು ಕುಡಿಕೆ ಒಡೆಯುವುದು ಹಾಗೂ ಓಕುಳಿ ಆಟ ಜರುಗಿತು.ಭಕ್ತರು ಶ್ರೀ ದೇವರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು.ಶ್ರೀ ಕೃಷ್ಣ ದೇವರ ನಾಮಸ್ಮರಣೆಯನ್ನು ಕೊಂಡಾಡಿದರು.
ಸತೀಶ್ ಭಟ್ ಮಸ್ಕಿ ಮಾತನಾಡಿ,ಭಕ್ತರು ಮತ್ತು ದಾನಿಗಳ ಸಹಕಾರದಿಂದ ಅಷ್ಟಮಿ ಉತ್ಸವವನ್ನು ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.ದೇವಸ್ಥಾನದಲ್ಲಿ ಉತ್ಪತ್ತಿ ಕಮ್ಮಿ ಇದ್ದು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ.ಮೂಜುರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನವನ್ನು ಅಭಿವೃದ್ಧಿ ಗೊಳಿಸಲು ಸರಕಾರ ವಿಶೇಷ ಅನುದಾನ ನೀಡಬೇಕು ಎಂದು ಹೇಳಿದರು.
ದೇವಸ್ಥಾನದ ಅರ್ಚಕರಾದ ರಾಘವೇಂದ್ರ ಕಾರಂತ ನಾವುಂದ ಮಾತನಾಡಿ,ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಎರಡು ದಿನಗಳಿಂದ ವಿಜೃಂಭಣೆಯಿಂದ ನಡೆದಿದೆ.ಶ್ರೀ ಗೋಪಾಲ ಕೃಷ್ಣ ದೇವರಿಗೆ ಮರದ ತೊಟ್ಟಿಲನ್ನು ಸಮರ್ಪಣೆ ಮಾಡಲಾಗಿದ್ದು.ಶ್ರೀ ದೇವತಾ ಕಾರ್ಯಗಳಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿ ಮಂಡಳಿ ಅಧ್ಯಕ್ಷರು ಬಾಬು ಶೆಟ್ಟಿ, ಸುರೇಶ ಖಾರ್ವಿ,ರಘು ಪೂಜಾರಿ,ಚಂದ್ರ ಪೂಜಾರಿ,ಬಾಬು ಪೂಜಾರಿ,ಗೌರಿ ಪೂಜಾರಿ,ಗಿರಿಜಾ ಮೊಗವೀರ,ಗ್ರಾಮ ಪಂಚಾಯಿತಿ ಸದಸ್ಯ ರಾಮ ಎಸ್ ಖಾರ್ವಿ,ಗಣೇಶ ಪೂಜಾರಿ ,ಅಭಿಷೇಕ ನಾವುಂದ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ:ಜಗದೀಶ
ನಮ್ಮ ಜಾಲತಾಣದಲ್ಲಿ ಸುದ್ದಿಗಳನ್ನು ಪ್ರಕಟಿಸಲು ಸಂಪರ್ಕಿಸಿ -9916284048

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page