ದೇವಾಡಿಗ ನವೋದಯ ಸಂಘದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

Share

Advertisement
Advertisement

ಬೆಂಗಳೂರು:ದೇವಾಡಿಗ ನವೋದಯ ಸಂಘದ ವಾರ್ಷಿಕ ಮಹಾಸಭೆ ಇತ್ತೀಚಿಗಷ್ಟೇ ಬೆಂಗಳೂರಿನ ಶ್ರೀನಿಧೀ ಲೇಔಟ್ ವೆಲ್ ಫೇರ್ ಅಸೋಸಿಯೇಷನ್ ಸಭಾಭವನದಲ್ಲಿ ನಡೆಯಿತು.ಬೆಂಗಳೂರು ದೇವಾಡಿಗ ನವೋದಯ ಸಂಘದ ಅಧ್ಯಕ್ಷ ಬಿ.ಆರ್ ದೇವಾಡಿಗ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಸುಧೀರ್ ದೇವಾಡಿಗ ಸಂಘದ 2019-23ರ ಸಾಲಿನ ಕಾರ್ಯಕ್ರಮಗಳ ವರದಿ ವಾಚಿಸಿದರು. ಸಂಘದ ಕೋಶಾಧಿಕಾರಿ ಮಂಜುನಾಥ ದೇವಾಡಿಗ ಸಂಘ 2019-23ರ ಸಾಲಿನ ಆಯವ್ಯಯಗಳ ವರದಿ ವಾಚಿಸಿದರು.

Advertisement

ದೇವಾಡಿಗ ನವೋದಯ ಸಂಘ ರಿ ಬೆಂಗಳೂರು ಇದರ 2023-2025ರ ನೂತನ ಕೋರ್ ಕಮಿಟಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಚುನಾವಣಾಧಿಕಾರಿ ಅನಿಲ್ ಅವರ ನೇತೃತ್ವದಲ್ಲಿ ನಡೆಯಿತು.ದೇವಾಡಿಗ ನವೋದಯ ಸಂಘ ರಿ ಬೆಂಗಳೂರು ಗೌರವಾಧ್ಯಕ್ಷ ಬಿ.ಆರ್ ದೇವಾಡಿಗ, ಅಧ್ಯಕ್ಷ ಹರಿ ದೇವಾಡಿಗ, ಉಪಾಧ್ಯಕ್ಷರಾಗಿ ಮಂಜುನಾಥ ದೇವಾಡಿಗ, ಕರುಣಾಕರ್ ದೇವಾಡಿಗ, ರಿತೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಚರಣ್ ಬೈಂದೂರು, ಜೊತೆ ಕಾರ್ಯದರ್ಶಿಯಾಗಿ ರವಿಚಂದ್ರ ಬಾರ್ಕೂರು, ಅವಿನಾಶ್ ದೇವಾಡಿಗ, ಕೋಶಾಧಿಕಾರಿಯಾಗಿ ಗೋಪಾಲ ಸೇರಿಗಾರ್, ಜೊತೆ ಕೋಶಾಧಿಕಾರಿಯಾಗಿ ವಿಶಾಲ್ ಪ್ರಮೋದ್, ಸಂಘಟನಾ ಕಾರ್ಯದರ್ಶಿಗಳು ಮಂಜುನಾಥ್ ಪಾಂಡೇಶ್ವರ್, ಸುಧೀರ್ ಮುದ್ರಾಡಿ, ಶಶಿಧರ್ ಬ್ರಹ್ಮಾವರ, ಮಂಜುನಾಥ್ ದೇವಾಡಿಗ, ನಿತ್ಯಾನಂದ ದೇವಾಡಿಗ, ಪ್ರವೀಣ್ ಮರವಂತೆ, ಮಾಹಿತಿ ಕಾರ್ಯದರ್ಶಿ – ಗುರು ಪ್ರಸಾದ್ ದೇವಾಡಿಗ, ಜೊತೆ ಮಾಹಿತಿ ಕಾರ್ಯದರ್ಶಿ ಸತೀಶ್, ಗೌರವ ಸಲಹಾ ಸಮಿತಿ ರಾಜೇಶ್ವರಿ ದೇವಾಡಿಗ, ಗೀತಾ ಮಂಜುನಾಥ್, ಕೃತಿ ರಿತೇಶ್, ಬಾಬು ದೇವಾಡಿಗ, ಜಗದೀಶ್ ದೇವಾಡಿಗ ಆಯ್ಕೆಗೊಂಡಿದ್ದಾರೆ.

ದೇವಾಡಿಗ ನವೋದಯ ಸಂಘ ರಿ ಬೆಂಗಳೂರು ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ಪುಷ್ಪ ಎಸ್, ಉಪಾಧ್ಯಕ್ಷೆಯಾಗಿ ದಿವ್ಯ ಸುಧೀರ್, ತ್ರೀವೇಖಿ ಕರುಣಾಕರ್, ಪ್ರಧಾನ ಕಾರ್ಯದರ್ಶಿ ಚಿತ್ರಲೇಖಾ ದೇವಾಡಿಗ, ಜೊತೆ ಕಾರ್ಯದರ್ಶಿ ಸಾಧನ ಪ್ರಕಾಶ್, ರಶ್ಮಿ ದೇವಾಡಿಗ, ಸಾಂಸ್ಕøತಿಕ ಕಾರ್ಯದರ್ಶಿ ಜ್ಯೋತಿ ದೇವಾಡಿಗ, ಜೊತೆ ಸಾಂಸ್ಕøತಿಕ ಕಾರ್ಯದರ್ಶಿ ಸುಮಾ ಅನಿಲ್ ಕುಮಾರ್ಮ ಚೈತ್ರಾ ಮಂಜುನಾಥ ಆಯ್ಕೆಗೊಂಡಿದ್ದಾರೆ.ದೇವಾಡಿಗ ನವೋದಯ ಸಂಘ ರಿ ಬೆಂಗಳೂರು ಯುವ ಘಟಕ ನೂತನ ಅಧ್ಯಕ್ಷ ಹರೀಶ್ ಶಂಕರನಾರಾಯಣ, ಉಪಾಧ್ಯಕ್ಷ ದಿನೇಶ್ ಅರೆಹೊಳೆ, ಪ್ರಧಾನ ಕಾರ್ಯದರ್ಶಿ ದಿವ್ಯಾ ವಿಜಯ್, ಜೊತೆ ಕಾರ್ಯದರ್ಶಿ ಅಭಿನಯ್ ದೇವಾಡಿಗ, ಪ್ರವೀಣ್ ಬೈಂದೂರು, ಕ್ರೀಡಾ ಕಾರ್ಯದರ್ಶಿ ಪ್ರಜ್ವಲ್ ಬೈಂದೂರು, ಜೊತೆ ಕ್ರೀಡಾ ಕಾರ್ಯದರ್ಶಿ ಅಭಿಷೇಕ್ ದೇವಾಡಿಗ, ರಿತೇಶ್ ದೇವಾಡಿಗ ಆಯ್ಕೆಗೊಂಡಿದ್ದಾರೆ.ದೇವಾಡಿಗ ಸಂಘದ ವಧುವರರ ವೇದಿಕೆ ಮುಖ್ಯಸ್ಥರಾಗಿ ಬಿ.ಆರ್ ದೇವಾಡಿಗ, ಗೋಪಾಲ್ ಶೇರಿಗಾರ್, ಮಂಜುನಾಥ್ ಪಾಂಡೇಶ್ವರ್, ಚಿತ್ರಲೇಖ ಆಯ್ಕೆಗೊಂಡಿದ್ದಾರೆ.ಪ್ರಧಾನ ಕಾರ್ಯದರ್ಶಿ ಸುಧೀರ್ ದೇವಾಡಿಗ ಸ್ವಾಗತಿಸಿ/ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Advertisement
Advertisement


Share

Leave a comment

Your email address will not be published. Required fields are marked *

You cannot copy content of this page