ಉದ್ಯಮಿ ನಾಗರಾಜ್ ಆರ್ ಸುವರ್ಣ ಮುಂಬೈಜೇಸಿ ಸಪ್ತಾಹ ಸಂಭ್ರಮ ಸುಮನಸ- 2024 ಕಾರ್ಯಕ್ರಮದಲ್ಲಿಸಾಧನಾಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ

Share

ಬೈಂದೂರು:ನಾಗರಾಜ್ ಆರ್ ಸುವರ್ಣ ಮುಂಬೈ
ಧರ್ಮಶ್ರೀ ರಿಲೀಪ್ ಫೌಂಡೇಶನ್ (ರಿ)
ಮಟ್ನಕಟ್ಟೆ ಬೈಂದೂರು
ಇವರು ಧರ್ಮಶ್ರೀ ರಿಲೀಪ್ ಫೌಂಡೇಶನ್ ಸಂಸ್ಥಾಪಕ ಮೆನೇಜಿಂಗ್ ಟ್ರಸ್ಟಿ ಹಾಗೂ ಧರ್ಮಶ್ರೀ ಟೀ ತಯಾರಿಕಾ ಸಂಸ್ಥೆಗಳನ್ನು ಮುನ್ನಡೆಸುತ್ತಾ ತಮ್ಮ ಹುಟ್ಟೂರಿನ ನೆನಪಿಗಾಗಿ ಶಾಲಾ ಹಾಗೂ ವಿವಿಧ ಸಂಸ್ಥೆಗಳಿಗೆ ಸಹಾಯ ಸಹಕಾರವನ್ನು ನೀಡುತ್ತಾ. ಇವರು ವೃತ್ತಿ ನಿಯಮಗಳು ಶ್ರದ್ದೆ ಹಾಗೂ ಸೃಜನಶೀಲ ಕಾರ್ಯಗಳಲ್ಲಿ ಸದಾ ಪ್ರಾಮಾಣಿಕ ಫಲವನ್ನೇ ನಂಬಿ. ಇಲ್ಲಿಯವರೆಗೆ ಯಾವುದೇ ವೈಯಕ್ತಿಕವಾದ ಪ್ರಶಸ್ತಿ, ಬಿರುದುಗಳಿಗೆ ಆಸೆಪಡದೆ ಸದಾ ಸಾಮಾಜಿಕ, ಸಾಮರಸ್ಯ, ಸಾಂಸ್ಕೃತಿಕ ಚಟುವಟಿಕೆಯಲ್ಲಿ. ತೊಡಗಿದ್ದಾರೆ
ಇವರು ಕಳೆದ 20 ವರ್ಷಗಳಿಂದ ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಉತ್ತರಾಖಂಡ, ಗೋವಾ ರಾಜ್ಯಗಳಲ್ಲಿ ಕ್ಯಾನ್ಸರ್ ರೋಗಿಗಳಿಗೆ ಅನ್ನದಾನ ,ಶಾಲಾ ಮಕ್ಕಳಿಗೆ ಕಲಿಯುವಿಕೆಗೆ ಪ್ರೋತ್ಸಾಹ ದೈವ ದೇವಸ್ಥಾನಗಳಿಗೆ ಧನಸಹಾಯದೊಂದಿಗೆ ಕಡುಬಡವರು, ಸೂರಿಲ್ಲದವರಿಗೆ ಆಸರೆ ನೀಡುತ್ತಾ ಹೀಗೆ ಅಪಾರ ಪ್ರಮಾಣದ ಸಾಮಾಜಿಕ ಸೇವೆಗಳನ್ನು ಧರ್ಮಶ್ರೀ ರಿಲೀಪ್ ಫೌಂಡೇಶನ್‌ ಮೂಲಕ ಮೂಲಕ ನೀಡುತ್ತಾ ಬಂದಿರುತ್ತಾರೆ ಶ್ರೀಯುತರ ಸೇವೆಯನ್ನು ಪರಿಗಣಿಸಿ ಬೆಂಗಳೂರಿನ ಸಂಸ್ಥೆಯು ‘ಅನ್ನಬ್ರಹ್ಮ ಮಾಣಿಕ್ಯ 2022’ ಪ್ರಶಸ್ತಿ ಕುಂದಾಪುರದ ಸಂಸ್ಥೆಯಿಂದ ನಮ್ಮೂರ ಕಾಯಕಯೋಗಿ 2023 ಹಾಗೂ ಸಂಸ್ಥೆಯಿಂದ ಸಂಸ್ಥೆಯಿಂದ ಸಂಸ್ಥೆಯಿಂದ ‘ಪ್ರಶಸ್ತಿ’ಯನ್ನ ನೀಡಿ ಸನ್ಮಾನಿಸಿರುತ್ತಾರೆ. ಶ್ರೀಯುತರ ಅನುಪಮ ಸೇವೆಯನ್ನು ಗುರುತಿಸಿ, 21 ಸೆಪ್ಟೆಂಬರ್ 2024 ರಂದು ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಜರುಗಿದ ವಿಂಶತಿ ಸಂಭ್ರಮ ‘ಸುಮನಸು 2024’ ರ ಸಪ್ತಾಹ ಗಣ್ಯರ ಉಪಸ್ಥಿಯಲ್ಲಿ ‘ಸಾಧನಾಶ್ರೀ’ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ವಿವಿಧ ಗಣ್ಯರು, ಜೇಸಿ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಸ್ನೇಹಿತರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Share

Leave a comment

Your email address will not be published. Required fields are marked *

You cannot copy content of this page