ತ್ರಾಸಿ:ಬ್ರಹ್ಮಕಲಶೋತ್ಸವದ ವೈದಿಕ ವಿಧಾನ ಕಾರ್ಯಕ್ರಮ

ಕುಂದಾಪುರ:ತಾಲೂಕಿನ ತ್ರಾಸಿ ಗ್ರಾಮದ ಶ್ರೀರಾಮ,ಶ್ರೀಗಣಪತಿ,ಶ್ರೀಅಯ್ಯಪ್ಪ ಸ್ವಾಮಿ ದೇವರ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಬ್ರಹ್ಮಕಲಶೋತ್ಸವದ ವೈದಿಕ ವಿಧಾನ ಮತ್ತು ಧಾರ್ಮಿಕ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನದೊಂದಿಗೆ ಗುರುವಾರ ಪುರೋಹಿತರ ನೇತೃತ್ವದಲ್ಲಿ ನಡೆಯಿತು.
ಬ್ರಹ್ಮಕಲಶೋತ್ಸವದ ವೈದಿಕ ವಿಧಾನ ಮತ್ತು ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ದೇವತಾ ಪ್ರಾರ್ಥನರ,ನವಗ್ರಹ ಹೋಮ ಸಹಿತಿ ಗುರುಗನಪತಿ ಪೂಜೆ,ಸ್ಥಾನ ಶುದ್ಧಿ,ಪ್ರಾಸಾದ ಶುದ್ಧಿ,ರಾಕ್ಷೋಘ್ನ ಹೋಮ,ವಾಸ್ತು ಹೋಮ,ವಾಸ್ತು ಪೂಜೆ,ಬಲಿ,ಶಕ್ತಿ ಹೋಮ ಜರುಗಿತು.
ಶ್ರೀರಾಮ,ಶ್ರೀಗಣಪತಿ,ಶ್ರೀಅಯ್ಯಪ್ಪ ಸ್ವಾಮಿ ದೇವರ ಅಷ್ಟಬಂಧ ಬಹ್ಮಕಲಶಾಭಿಷೇಕ ಏಪ್ರಿಲ್ 05 ರ ಶುಕ್ರವಾರ ದಂದು ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಲಿದೆ.ಮಧ್ಯಾಹ್ನ ಅನ್ನಸಂತರ್ಪಣೆ,ಸಾಂಸ್ಕ್ರತಿಕ ಕಾರ್ಯಕ್ರಮ,ಕುಣಿತ ಭಜನೆ ನಡೆಯಲಿದೆ.
ಏಪ್ರಿಲ್ 06 ರಂದು ಶನಿವಾರ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ,ಮಹಾಪೂಜೆ,ನಾನಾ ರೀತಿಯ ದೇವತಾ ಕಾರ್ಯಕ್ರಮಗಳು,ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.































































































































































































































































































































































































































































































































































































































































































































































































































































































































































































































































































































































































































































































































































































































































































