ಮರವಂತೆ:ಗ್ರಾಹಕರ ಸಭೆ,ತೇರಿಗೆ ಮಾಹಿತಿ ಕಾರ್ಯಕ್ರಮ

ಬೈಂದೂರು:ಕೃಷಿ ಸಾಲ ಸ್ವಂತ ಬಂಡವಾಳ ಮತ್ತು ಸ್ವಸಾಹಯ ಸಂಘಗಳು ಸೇರಿದಂತೆ ಇನ್ನಿತರ ಒಳ್ಳೆ ಉದ್ದೇಶಗಳಿಗೆ ಸಾಲವನ್ನು ನೀಡುತ್ತಾ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಗೆಗಳಿಗೆ ಸಹಕಾರವನ್ನು ನೀಡುತ್ತಿರುವ ನಮ್ಮ ಈ ಸಂಸ್ಥೆ ಏಳಿಗೆಗೆ ಸಂಘದ ಸದಸ್ಯರ ಕೊಡುಗೆ ಅಪಾರವಾದದ್ದು ಎಂದು ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಅಧ್ಯಕ್ಷ ರಾಜು.ಎಸ್ ಪೂಜಾರಿ ಹೇಳಿದರು.

ಬೈಂದೂರು ತಾಲೂಕಿನ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಅದರ ಮರವಂತೆ ಶಾಖೆಯಲ್ಲಿ ಸೋಮವಾರ ನಡೆದ ಗ್ರಾಹಕರ ಸಭೆ,ತೇರಿಗೆ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಎಲ್ಲರ ಸಹಭಾಗಿತ್ವದಿಂದ ಇವೊಂದು ಸಂಸ್ಥೆ ಬೆಳೆದಿದೆ ಇದೊಂದು ನಿರ್ದೇಶಕ ಮಂಡಳಿ ಸಂಸ್ಥೆ ಅಲ್ಲಾ ಸಂಘದ ಪ್ರತಿಯೊಬ್ಬ ಸದಸ್ಯರ ಸಂಸ್ಥೆ ಆಗಿದೆ.ಸಂಸ್ಥೆ ಎಷ್ಟೆ ಬೆಳೆದರು ಅದು ಸಂಘದ ಸದಸ್ಯರ ಆಸ್ತಿಯಾಗಿ ಉಳಿಯುತ್ತದೆ ಎಂದರು.ಗ್ರಾಹಕರ ಸೇವೆಯನ್ನು ಸ್ಮರಿಸುವ ದೃಷ್ಟಿಯಿಂದ ಇವೊಂದು ಸಭೆಯನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜತೀಂದ್ರ ಮರವಂತೆ ಅವರು ಆದಾಯ ತೇರಿಗೆ ಕುರಿತು ಮಾಹಿತಿ ನೀಡಿ ಮಾತನಾಡಿ,ತೇರಿಗೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಎನ್ನುವ ಎರಡು ವಿಧದ ತೇರಿಗೆ ಇದೆ ಸಕಾಲದಲ್ಲಿ ತೇರಿಗೆ ಪಾವತಿ ಮಾಡುವುದರಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಕೈಜೋಡಿಸಿದಂತೆ ಆಗುತ್ತದೆ ಎಂದು ಹೇಳಿದರು.
ಮರವಂತೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಲೋಕೇಶ್ ಖಾರ್ವಿ,ಉಪಾಧ್ಯಕ್ಷ ಚಂದ್ರಶೀಲ ಶೆಟ್ಟಿ,ನಿರ್ದೇಶಕರಾದ ಬೋಜ ನಾಯ್ಕ್,ನಾರಾಯಣ ಶೆಟ್ಟಿ,ಪ್ರಕಾಶ್ ದೇವಾಡಿಗ,ರಾಮಕೃಷ್ಣ ಖಾರ್ವಿ,ವಾಸು ಪೂಜಾರಿ,ಸರೋಜಾ ಗಾಣಿಗ,ನಾಗಮ್ಮ,ರಾಮ,ಹಿರಿಯರಾದ ಜನಾರ್ದನ ಮರವಂತೆ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ರಾಜು ಎಸ್ ಪೂಜಾರಿ ಸ್ವಾಗತಿಸಿದರು.ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.ಸಿಇಒ ಸುರೇಶ್ ಅಳ್ವೆಗದ್ದೆ ವಂದಿಸಿದರು.ಪುಸ್ತಕ ನಿರ್ವಹಣೆ,ಸಾಲ ಮರುಪಾವತಿ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಅತ್ಯುತ್ತಮವಾಗಿ ನಿರ್ವಹಣೆ ತೋರಿದ ಮೂರು ಸ್ವಸಾಹಯ ಸಂಘಗಳಿಗೆ ಪ್ರಶಸ್ತಿ ನೀಡಲಾಯಿತು.ಲಕ್ಕಿ ಕೂಪನ್ ಮೂಲಕ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವರದಿ-ಜಗದೀಶ ದೇವಾಡಿಗ
