ಗಂಗೊಳ್ಳಿ:ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ
ಕುಂದಾಪುರ:ಕಿನಾರಾ ಜ್ಯೋತಿ ಮತ್ತು ಪ್ರಗತಿ ಮಹಿಳಾ ಸ್ವ ಸಹಾಯ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆ, ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಹೊಸತು ಆಚರಣೆ ಕಾರ್ಯಕ್ರಮ ಗಂಗೊಳ್ಳಿಯ ವಿಲ್ಸನ್ ಡಯಾಸ್ ಮನೆ ವಠಾರದಲ್ಲಿ ನಡೆಯಿತು.
ಗಂಗೊಳ್ಳಿ ಚರ್ಚ್‍ನ ಧರ್ಮಗುರು ರೆ.ಫಾ.ತೋಮಸ್ ರೋಶನ್ ಡಿಸೋಜ ಆಶೀರ್ವಚನ ನೀಡಿದರು.ಚರ್ಚಿನ ಪಾಲನಾ ಮಂಡಳಿ ಕಾರ್ಯದರ್ಶಿ ಗ್ಲೋರಿಯಾ ಡಿಸೋಜ,ಕುಂದಾಪುರ-ಬೈಂದೂರು ವಲಯದ ಸ್ವಸಹಾಯ ಸಂಘಗಳ ಪ್ರೇರಕಿ ಸಿಂತಿಯಾ ರೊಡ್ರಿಗಸ್,ಅಮೃತ ಸ್ತ್ರೀ ಸಂಘಟನೆ ಅಧ್ಯಕ್ಷೆ ಜೆಸಿಂತಾ ಮಿರಾಂದ ಉಪಸ್ಥಿತರಿದ್ದರು.ಹೆಣ್ಣು ಮಕ್ಕಳನ್ನು ಹಾಗೂ ಸ್ಥಳೀಯ ಶಿಕ್ಷಕರನ್ನು ಗೌರವಿಸಲಾಯಿತು.ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಪ್ರೀತಿ ಫೆರ್ನಾಂಡಿಸ್ ಸ್ವಾಗತಿಸಿದರು.ವೀಣಾ ರೆಬೆರೊ ವಂದಿಸಿದರು.ಸುನೀತಾ ರೆಬೆರೊ ಕಾರ್ಯಕ್ರಮ ನಿರ್ವಹಿಸಿದರು.