ಕಾರ್ಗಿಲ್ ವಿಜಯ ದಿವಸ್:ವಿದ್ಯಾರ್ಥಿ ಜೀವನದಲ್ಲಿಯೇ ರಾಷ್ಟ್ರ ಭಕ್ತಿ ಮೈಗೂಡಿಸಿಕೊಳ್ಳಬೇಕು-ಪ್ರಿನ್ಸಿಪಾಲ್ ಗಣೇಶ ಮೊಗವೀರ

ಕುಂದಾಪುರ:ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜು ಮತ್ತು ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲೀಷ್ ಮಿಡೀಯಂ ಸ್ಕೂಲ್‌ನಲ್ಲಿ (ಶುಭದಾ) ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಹೆಮ್ಮಾಡಿ ಜನತಾ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಪ್ರಿನ್ಸಿಪಾಲ್ ಗಣೇಶ ಮೊಗವೀರ ಮಾತನಾಡಿ,ವಿದ್ಯಾರ್ಥಿ ಜೀವನದಲ್ಲೆ ರಾಷ್ಟ್ರ ಭಕ್ತಿಯನ್ನು ಮೈಗೂಡಿಸಿ ಕೊಳ್ಳಬೇಕು.ಸೈನಿಕರು ಹಾಗೂ ರೈತರು ನಮ್ಮ ದೇಶದ ರಿಯಲ್ ಹಿರೋಗಳು ಎಂದು ಅಭಿಪ್ರಾಯಪಟ್ಟರು.ಭಾರತೀಯ ಸೇನೆಯ ನಿವೃತ್ತ ಜೂನಿಯರ್ ಕಮಿಷನ್ಸ್ ಅಧಿಕಾರಿ ಜೋಷಿ ಪಿ.ಪಿ.ಹುತಾತ್ಮ ಸೈನಿಕರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಸೈನಿಕರ ತ್ಯಾಗ ಬಲಿದಾನಗಳನ್ನು ಸ್ಮರಿಸಿದರು.ವೈಸ್ ಪ್ರಿನ್ಸಿಪಾಲ್ ರಮೇಶ ಪೂಜಾರಿ, ಬೋಧಕ/ಬೋಧಕೇತರ ವೃಂದದವರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಭಿಜಿತ್ ಸ್ವಾಗತಿಸಿದರು.ಉಪನ್ಯಾಸಕರಾದ ಉದಯ ನಾಯ್ಕ ನಿರೂಪಿಸಿದರು.ಹರ್ಷ ಶೆಟ್ಟಿ ವಂದಿಸಿದರು.